Saturday, July 6, 2024
Google search engine
Homeಕ್ರೀಡೆvirat kohli ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ!

virat kohli ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ!

ಕಿಂಗ್ ವಿರಾಟ್ ಕೊಹ್ಲಿ ಭಾರತ ತಂಡ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ನ ಗಯಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದ ಭಾರತ ತಂಡ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಟಿ-20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ವಿದಾಯ ಹೇಳಲು ಬಯಸಿದ್ದೆ. ಆದರೆ ಈಗ ಆ ರಹಸ್ಯವಾಗಿ ಇಟ್ಟುಕೊಳ್ಳುವುದಿಲ್ಲ. ಇದು ನನ್ನ ಕೊನೆಯ ಟಿ-20 ಕ್ರಿಕೆಟ್ ಆಗಿದೆ ಎಂದರು.

ಅಧಿಕೃತವಾಗಿ ಟಿ-20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದಿರಾ ಎಂಬ ಪ್ರಶ್ನೆಗೆ ಹೌದು ಎಂದು ಹೇಳುವ ಮೂಲಕ ಕೊಹ್ಲಿ ನಿವೃತ್ತಿ ನಿರ್ಧಾರವನ್ನು ದೃಢಪಡಿಸಿದರು.

ಇದು ನನ್ನ ಕೊನೆಯ ಟಿ-20 ಕ್ರಿಕೆಟ್ ಆಗಿದ್ದರಿಂದ ಒತ್ತಡದಲ್ಲಿದ್ದೆ. ಆದರೆ ಇಡೀ ಟೂರ್ನಿಯಲ್ಲಿ ರನ್ ಗಳಿಸದೇ ಇದ್ದಿದ್ದರಿಂದ ಮಾನಸಿಕವಾಗಿ ಹೆಚ್ಚು ಒತ್ತಡವಿತ್ತು. ಆದರೆ ಫೈನಲ್ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ರನ್ ಗಳಿಸಲು ಸಾಧ್ಯವಾಗಿದ್ದಕ್ಕೆ ಸಂತೋಷವಿದೆ. ಉತ್ತುಂಗದೊಂದಿಗೆ ಟಿ-20 ಕ್ರಿಕೆಟ್ ಗೆ ವಿದಾಯ ಹೇಳಲು ಬಯಸುತ್ತಿದ್ದೇನೆ ಎಂದು ಕೊಹ್ಲಿ ವಿವರಿಸಿದರು.

ನನಗೆ ಇದು 6ನೇ ವಿಶ್ವಕಪ್ ಆಗಿದೆ. ಈ ಪ್ರಶಸ್ತಿ ಗೆಲ್ಲುವ ಶ್ರೇಯಸ್ಸು ರೋಹಿತ್ ಶರ್ಮಗೆ ಸಲ್ಲಬೇಕು. ಏಕೆಂದರೆ ಅವರು ನನಗಿಂತ ಹೆಚ್ಚು ಅರ್ಹರು ಎಂದು ಕೊಹ್ಲಿ ಹೇಳಿದರು.

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ 125 ಪಂದ್ಯಗಳಲ್ಲಿ 1 ಶತಕ, 38 ಅರ್ಧಶತಕ ಸೇರಿದಂತೆ 48.69 ಸೇರಿದಂತೆ 117 4188 ರನ್ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments