Kannadavahini

ಬಾರಿಸು ಕನ್ನಡ ಡಿಂಡಿಮವ

T20 world cup

ವನಿತೆಯರ ಟಿ-20 ವಿಶ್ವಕಪ್: ಸೋತಿದ್ದು ಪಾಕಿಸ್ತಾನ, ಹೊರಬಿದ್ದಿದ್ದು ಭಾರತ!

ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋತಿದ್ದರಿಂದ ಭಾರತ ತಂಡ ವನಿತೆಯರ ಟಿ-20 ವಿಶ್ವಕಪ್ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ. ಈ ಮೂಲಕ 8 ಆವೃತ್ತಿಗಳ ಪೈಕಿ ಇದೇ ಮೊದಲ ಬಾರಿ ಭಾರತ ವನಿತೆಯರು ಗುಂಪು ಹಂತದಲ್ಲೇ ನಿರ್ಗಮಿಸಿ ಮುಖಭಂಗಕ್ಕೆ ಒಳಗಾಗಿದೆ. ಭಾರತ ತಂಡ ಭಾನುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್ ಗಳಿಂದ ಸೋಲುಂಡಿತ್ತು….

ವನಿತೆಯರ ಟಿ-20 ವಿಶ್ವಕಪ್: ಇತಿಹಾಸದಲ್ಲೇ ಅತೀ ದೊಡ್ಡ ಜಯದ ದಾಖಲೆ ಬರೆದ ಭಾರತ!

ಭಾರತ ವನಿತೆಯರ ತಂಡ 82 ರನ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ವನಿತೆಯರ ಟಿ-20 ವಿಶ್ವಕಪ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಿನ ದಾಖಲೆ ಬರೆದಿದೆ. ದುಬೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡು 172 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ 19.5 ಓವರ್ ಗಳಲ್ಲಿ 90 ರನ್…

ವನಿತೆಯರ ಟಿ-20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ

ಭಾರತ ವನಿತೆಯರ ತಂಡ 6 ವಿಕೆಟ್ ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಟಿ-20 ವಿಶ್ವಕಪ್ ನಲ್ಲಿ ಮೊದಲ ಗೆಲುವು ದಾಖಲಿಸಿತು. ದುಬೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 8 ವಿಕೆಟ್ ಗಳಿಗೆ 105 ರನ್ ಗಳಿಗೆ ನಿಯಂತ್ರಿಸಿದ ಭಾರತ ತಂಡ 7 ಎಸೆತಗಳು ಬಾಕಿ ಇರುವಂತೆಯೇ 4…

ಮಹಿಳಾ ಟಿ-20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಸ್ಥಾನ!

ಕನ್ನಡತಿ ಶ್ರೇಯಾಂಕಾ ಪಾಟೀಲ್ ವನಿತೆಯರ ಟಿ-20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಮಂಗಳವಾರ 15 ಸದಸ್ಯರ ಭಾರತ ವನಿತೆಯರ ತಂಡ ಪ್ರಕಟಿಸಿದ್ದು, ಕಳೆದ ಜುಲೈನಲ್ಲಿ ಫೈನಲ್ ಪ್ರವೇಶಿಸಿದ್ದ ತಂಡದಲ್ಲಿ ಬಹುತೇಕ ಆಟಗಾರ್ತಿಯನ್ನು ಉಳಿಸಿಕೊಳ್ಳಲಾಗಿದೆ. ಏಷ್ಯಾಕಪ್ ನಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರಗೆ ಬಿದ್ದಿದ್ದ ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ…

ಟಿ-20 ವಿಶ್ವಕಪ್ ನಿಂದ ಐಸಿಸಿಗೆ 167 ಕೋಟಿ ರೂ. ನಷ್ಟ!

ಅಮೆರಿಕದಲ್ಲಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ 20 ದಶಲಕ್ಷ ಡಾಲರ್ (167 ಕೋಟಿ ರೂ.) ನಷ್ಟವಾಗಿದೆ ಎಂದು ವರದಿ ಹೇಳಿದೆ. ಶ್ರೀಲಂಕಾದ ಕೊಲೊಂಬೊದಲ್ಲಿ ಐಸಿಸಿ ವಾರ್ಷಿಕ ಸಾಮಾನ್ಯ ಸಭೆ ಶುಕ್ರವಾರ ನಡೆಯಲಿದ್ದು, ಸಭೆಯಲ್ಲಿ ಅತ್ಯಂತ ಜನಪ್ರಿಯ ಟಿ-20 ವಿಶ್ವಕಪ್ ಟೂರ್ನಿ ನಷ್ಟದ ಕುರಿತು ಚರ್ಚೆ ಆಗಲಿದೆ ಎಂದು ಪಿಟಿಐ…

2.5 ಕೋಟಿ ರೂ. ಹೆಚ್ಚವರಿ ಬೋನಸ್ ನಿರಾಕರಿಸಿದ ರಾಹುಲ್ ದ್ರಾವಿಡ್!

ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಬಿಸಿಸಿಐ ನೀಡಿದ್ದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಬೋನಸ್ ಸ್ವೀಕರಿಸಲು ನಿರಾಕರಿಸಿದ್ದಾರೆ. ಬಿಸಿಸಿಐ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿತ್ತು. ರಾಹುಲ್ ದ್ರಾವಿಡ್ ಗೆ 5 ಕೋಟಿ ರೂ. ಹಾಗೂ ಬ್ಯಾಟಿಂಗ್,…

ಬಿಸಿಸಿಐ 125 ಕೋಟಿ ಬಹುಮಾನ ಮೊತ್ತದಲ್ಲಿ ರೋಹಿತ್, ಕೊಹ್ಲಿ, ದ್ರಾವಿಡ್ ಪಾಲು ಎಷ್ಟು?

ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನ ಮೊತ್ತದ ಹಂಚಿಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಗೆ ಪ್ರಯಾಣಿಸಿದ ಭಾರತ ತಂಡದಲ್ಲಿ 42 ಮಂದಿ ಇದ್ದರು. ಇದರಲ್ಲಿ 15 ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಮೀಸಲು ಆಟಗಾರರು…

ಟಿ-20: ಭಾರತದ ಯುವ ಪಡೆಗೆ 13 ರನ್ ಸೋಲಿನ ಆಘಾತ ನೀಡಿದ ಜಿಂಬಾಬ್ವೆ!

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಭಾರತದ ಯುವಪಡೆಗೆ 13 ರನ್ ಗಳಿಂದ ಆಘಾತ ನೀಡಿದ ಜಿಂಬಾಬ್ವೆ ತಂಡ ಟಿ-20 ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಹರಾರೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶುಭಮನ್ ಗಿಲ್ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 9…

T20 world cup ಪ್ರಧಾನಿ ಭೇಟಿ ಮಾಡಿದ ವಿಶ್ವ ಚಾಂಪಿಯನ್ ಟೀಂ ಇಂಡಿಯಾ!

ಟಿ-20 ವಿಶ್ವಕಪ್ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿರುವ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಗುರುವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಭೋಜನ ಸವಿದರು. ಗುರುವಾರ ಬೆಳಿಗ್ಗೆ ಕೆರಿಬಿಯನ್ ನೆಲದಲ್ಲಿ ವಿಶೇಷ ವಿಮಾನದಲ್ಲಿ ಆಗಮಿಸಿದ ಟೀಂ ಇಂಡಿಯಾ ಮಧ್ಯಾಹ್ನ ಪ್ರಧಾನಿ ಮೋದಿ ಅವರನ್ನು ದೆಹಲಿಯ ಅವರ ನಿವಾಸದಲ್ಲೇ ಭೇಟಿ ಮಾಡಿ ತಮ್ಮ…

ಭಾರತಕ್ಕೆ ಮರಳಿದ ಟಿ-20 ವಿಶ್ವ ಚಾಂಪಿಯನ್ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ!

ಟಿ-20 ವಿಶ್ವಕಪ್ ಗೆದ್ದು 17 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ ಬರ ನೀಗಿಸಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಸ್ವದೇಶಕ್ಕೆ ಮರಳಿದ್ದು, ಭರ್ಜರಿ ಸ್ವಾಗತ ದೊರೆಯಿತು. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ತಂಡ ಒಂದೂ ಪಂದ್ಯ ಸೋಲದೇ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಭಾರತಕ್ಕೆ ಸ್ವದೇಶಕ್ಕೆ…