ಕ್ರಿಕೆಟ್ ಅಂದರೆ ವಿಚಿತ್ರ. ವಿಸ್ಮಯ. ಏನೆಲ್ಲಾ ಆಗಬಹುದು ಎಂದು ಊಹಿಸುವುದು ಕೂಡ ಕಷ್ಟ. ಅಂತಹ ವಿಲಕ್ಷಣ ಘಟನೆ ಕತಾರ್ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ನಡೆದಿದೆ.
ಬ್ಯಾಂಕಾಕ್ ನಲ್ಲಿ ನಡೆದ ಕತಾರ್ ವಿರುದ್ಧದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 190 ರನ್ ಗಳಿಸಿತ್ತು. ಆದರೆ 192 ರನ್ ಗಳಿಸುವಷ್ಟರಲ್ಲಿ 10 ಆಟಗಾರ್ತಿಯರು ಗಾಯಗೊಂಡು ನಿವೃತ್ತಿ ಆಗಿದ್ದಾರೆ. ಈ ಮೂಲಕ ತಂಡ ಅಹಜವಾಗಿ ಆಲೌಟಾಗಿದೆ.
ನಾಯಕಿ ಇಶಾ ರೋಹಿತ್ ಓಜಾ 55 ಎಸೆತಗಳಲ್ಲಿ 113 ರನ್ ಗಳಿಸಿದರೆ, ತೀರ್ಥ ಸಾಕ್ಷಿ 42 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸಿ 192 ರನ್ ಜೊತೆಯಾಟ ನಿಭಾಯಿಸಿದರು. ಆದರೆ ಈ ಹಂತದಲ್ಲಿ ತಂಡದ ಎಲ್ಲಾ ಆಟಗಾರ್ತಿಯರು 10 ನಿವೃತ್ತಿ ಘೋಷಿಸಿದರು.
ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ಒಬ್ಬರು ಅಥವಾ ಗರಿಷ್ಠ ಇಬ್ಬರು ಆಟಗಾರರು ಗಾಯಗೊಂಡು ನಿವೃತ್ತಿ ಘೋಷಿಸಿದ್ದಾರೆ. ಆದರೆ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಲ್ಲಾ ಆಟಗಾರ್ತಿಯರು ಗಾಯಗೊಂಡು ನಿವೃತ್ತಿ ಘೋಷಿಸಿ ಅಸಹಜವಾಗಿ ಆಲೌಟಾಗಿದ್ದಾರೆ.
ಬ್ಯಾಂಕಾಕ್ ನಲ್ಲಿ ನಡೆದ ಪಂದ್ಯದಲ್ಲಿ ಮಳೆ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಆಟಗಾರ್ತಿಯರು ಟಿ-20 ಪಂದ್ಯವಾಗಿದ್ದರಿಂದ ಡಿಕ್ಲೇರ್ ಘೋಷಿಸುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ 193 ರನ್ ಗುರಿ ನೀಡಲು ಮೈದಾನಕ್ಕೆ ಬಂದಷ್ಟೇ ವೇಗವಾಗಿ ಗಾಯಗೊಂಡು ನಿವೃತ್ತಿ ಘೋಷಿಸಿದರು. ಬ್ಯಾಟಿಂಗ್ ಗೆ ಇಳಿದ ಕತಾರ್ ತಂಡ 29 ರನ್ ಗೆ ಆಲೌಟಾಗಿ 163 ರನ್ ಗಳಿಂದ ಸೋಲುಂಡಿತು. ರಿಜ್ಪಾ ಎಮ್ಯುನೆಲ್ ಗರಿಷ್ಠ 20 ರನ್ ಬಾರಿಸಿದರು.



