2019ರ ಪುಲ್ವಾಮಾ ದಾಳಿಯ ಹಿಂದೆ ನಮ್ಮ ಪಾತ್ರ ಇತ್ತು ಎಂದು ಪಾಕಿಸ್ತಾನ ಸೇನೆ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಪಾಕಿಸ್ತಾನ ನಡೆಸಿದ ತಾಂತ್ರಿಕ ಬುದ್ದಿವಂತಿಕೆ ಆಗಿದೆ. ಈ ದಾಳಿ ಯಶಸ್ವಿಯಾಗಿ ನಡೆಸಿದ್ದೇವು ಎಂದು ಪಾಕಿಸ್ತಾನ ಸೇನೆ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶೀ ಪತ್ರಕರ್ತರು ಸೇರಿದಂತೆ ಹಲವಾರು ಪತ್ರಕರ್ತರ ಸಮ್ಮುಖದಲ್ಲಿ ಒಪ್ಪಿಕೊಂಡಿದೆ.
ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಈ ವಿಷಯ ತಿಳಿಸಿದ್ದು, ಪಾಕಿಸ್ತಾನ ಎಷ್ಟು ಬುದ್ದಿವಂತಿಕೆಯಿಂದ ಪುಲ್ವಾಮಾ ದಾಳಿ ನಡೆಸಿತು ಎಂಬುದನ್ನು ಇಡೀ ಜಗತ್ತು ನೋಡಿದೆ. ನಾವು ನಮ್ಮ ಬುದ್ದಿವಂತಿಕೆ ತೋರಿಸಿದ್ದೇವೆ. ಯುದ್ಧದ ತಂತ್ರದ ಭಾಗವಾಗಿತ್ತು ಈ ದಾಳಿ ಎಂದು ಹೇಳಿದ್ದಾರೆ.
ಪುಲ್ವಾಮಾ ಮಾತ್ರವಲ್ಲ, ಪೆಹಲ್ಗಾಮ್ ನಲ್ಲಿ ನಡೆದ ದಾಳಿಯ ಹಿಂದೆಯೂ ನಮ್ಮ ಕೈವಾಡವಿದೆ. ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರೆ, ಪೆಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಹತ್ಯೆಯಾಗಿದ್ದರು.



