Tuesday, October 6, 2026
Google search engine
Homeದೇಶಎಸ್ ಎಂಇ ಅಭಿವೃದ್ಧಿಗೆ 10 ಸಾವಿರ ಕೋಟಿ ನಿಧಿ: ಕೇಂದ್ರ ಸಂಪುಟ ಅನುಮೋದನೆ

ಎಸ್ ಎಂಇ ಅಭಿವೃದ್ಧಿಗೆ 10 ಸಾವಿರ ಕೋಟಿ ನಿಧಿ: ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ:ಸಾರಿಗೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್ ಎಂಇ) ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಸಮಗ್ರ ಸಾರಿಗೆ ಮತ್ತು ಸರಕು ಸಾಗಣೆ ಪ್ರಾಧಿಕಾರ (ಐಟಿಎಲ್ ಎ) ಸ್ಥಾಪನೆಗೆ ಹಾಗೂ ₹10,000 ಕೋಟಿ ಮೊತ್ತದ ಎಸ್‌ಎಂಇ ಬೆಳವಣಿಗೆ ನಿಧಿ (ಎಸ್ ಜಿಎಫ್) ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ರಸ್ತೆ, ರೈಲು, ಬಂದರು, ವಿಮಾನಯಾನ, ಒಳನಾಡು ಜಲಮಾರ್ಗ, ಕರಾವಳಿ ಸಾಗಣೆ, ನಗರ ಸಾರಿಗೆ ಹಾಗೂ ಸರಕು ಸಾಗಣೆ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಸಮಗ್ರವಾಗಿ ಯೋಜಿಸಲು ಐಟಿಎಲ್ ಎ ರಾಷ್ಟ್ರೀಯ ಮಟ್ಟದ ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರದಲ್ಲಿ ಸಂಶೋಧನೆ, ಯೋಜನೆ, ಯೋಜನೆಗಳ ಮೌಲ್ಯಮಾಪನ, ಮೇಲ್ವಿಚಾರಣೆ ಹಾಗೂ ಅಂದಾಜುಗಳನ್ನು ಸಮನ್ವಯಗೊಳಿಸುವುದು ಐಟಿಎಲ್ ಎಯ ಪ್ರಮುಖ ಉದ್ದೇಶವಾಗಿದೆ.

₹500 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳ ತಾಂತ್ರಿಕ ಮೌಲ್ಯಮಾಪನ ಹಾಗೂ ಮೇಲ್ವಿಚಾರಣೆಯನ್ನೂ ಐಟಿಎಲ್ ಎ ಕೈಗೊಳ್ಳಲಿದೆ.

ಇದರ ಜೊತೆಗೆ ಜಿಎಸ್ ಟಿಎನ್ ,ಫಾಸ್ ಟಾಗ್,ಜಿಪಿಎಸ್ ಹಾಗೂ ನಗರ ಸಂಚಾರ ವ್ಯವಸ್ಥೆಗಳಿಂದ ಲಭ್ಯವಾಗುವ ಮಾಹಿತಿಯನ್ನು ಒಟ್ಟುಗೂಡಿಸಿ ರಾಷ್ಟ್ರೀಯ ಸಾರಿಗೆ ದತ್ತಾಂಶ ಸಂಗ್ರಹ ರೂಪಿಸುವ ಉದ್ದೇಶವಿದೆ. ಈ ದತ್ತಾಂಶದ ಮೂಲಕ ಸರಕು ಸಾಗಣೆ ಮಾರ್ಗಗಳ ವಿಶ್ಲೇಷಣೆ ಹಾಗೂ ವಿವಿಧ ಯೋಜನೆಗಳ ಮೇಲ್ವಿಚಾರಣೆಗೆ ನೆರವಾಗಲಿದೆ.

ಎಸ್‌ಎಂಇಗಳಿಗೆ ₹10,000 ಕೋಟಿ:

ಇದೇ ವೇಳೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡಲು ₹10,000 ಕೋಟಿ ಮೊತ್ತದ ಎಸ್‌ಎಂಇ ಬೆಳವಣಿಗೆ ನಿಧಿ (ಎಸ್ ಜಿಎಫ್) ಸ್ಥಾಪನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ 2026-27ರಲ್ಲಿ ಈ ನಿಧಿಯನ್ನು ಘೋಷಿಸಲಾಗಿತ್ತು.

ಸಾಮರ್ಥ್ಯ ಹೊಂದಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದೀರ್ಘಾವಧಿಯ ಬಂಡವಾಳ ಒದಗಿಸುವುದು ನಿಧಿಯ ಪ್ರಮುಖ ಉದ್ದೇಶವಾಗಿದೆ. ನಿರ್ಮಾಣ ಕ್ಷೇತ್ರದ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಇದರೊಂದಿಗೆ ಸೇವಾ ಕ್ಷೇತ್ರ, ತಂತ್ರಜ್ಞಾನ, ನವೋದ್ಯಮ ಹಾಗೂ ಪ್ರಮುಖ ಮೌಲ್ಯ ಸರಪಳಿಗಳಲ್ಲಿರುವ ಉದ್ಯಮಗಳಿಗೂ ನಿಧಿಯ ಮೂಲಕ ಬೆಂಬಲ ದೊರೆಯಲಿದೆ. ಉದ್ಯಮಗಳ ವಿಸ್ತರಣೆ, ಸ್ಪರ್ಧಾತ್ಮಕತೆ ಹೆಚ್ಚಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಭಾರತೀಯ ಉದ್ಯಮಗಳನ್ನು ರೂಪಿಸುವಲ್ಲಿ ಈ ನಿಧಿ ನೆರವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments