Wednesday, July 3, 2024
Google search engine
Homeಕ್ರೀಡೆWPL T20: ಕೊನೆಯ ಎಸೆತದಲ್ಲಿ ಎಡವಿದ ಆರ್ ಸಿಬಿಗೆ 1 ರನ್ ರೋಚಕ ಸೋಲು!

WPL T20: ಕೊನೆಯ ಎಸೆತದಲ್ಲಿ ಎಡವಿದ ಆರ್ ಸಿಬಿಗೆ 1 ರನ್ ರೋಚಕ ಸೋಲು!

ಮಧ್ಯಮ ಕ್ರಮಾಂಕದಲ್ಲಿ ರೀಚಾ ಘೋಷ್ ಸಿಡಿಲಬ್ಬರದ ಅರ್ಧಶತಕದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವನಿತೆಯರ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಕೇವಲ 1 ರನ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವೀರೋಚಿತ ಸೋಲುಂಡಿದೆ.

ಡೆಲ್ಲಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 181 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್ ಸಿಬಿ ಕೊನೆಯ ಓವರ್ ನಲ್ಲಿ 15 ರನ್ ಗಳಿಸಬೇಕಿತ್ತು. ರೀಚಾ ಘೋಷ್ 2 ಸಿಕ್ಸರ್ ಸಿಡಿಸಿದರೂ ಕೊನೆಯ ಎಸೆತದಲ್ಲಿ ರನೌಟಾಗಿ 1 ರನ್ ನಿಂದ ಆಘಾತ ಅನುಭವಿಸಿತು. ರೀಚಾ ಘೋಷ್ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 51 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಜೆಮಿಹಾ ರೋಡ್ರಿಗಜ್ (58) ಮತ್ತು ಅಲೆನ್ಸ್ ಕ್ಯಾಪ್ಸಿ (48) 3ನೇ ವಿಕೆಟ್ ಗೆ 97 ರನ್ ಜೊತೆಯಾಟ ನಿಭಾಯಿಸಿ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಆರ್ ಸಿಬಿ ಪರ ಶ್ರೇಯಾಂಕಾ ಪಾಟೀಲ್ 4 ವಿಕೆಟ್ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments