17
ಗಾಮಿನಿ ಹೆಸರಿನ ಹೆಣ್ಣು ಚೀತಾ ಮಧ್ಯಪ್ರದೇಶದ ಕುನೊ ಅರಣ್ಯ ಪ್ರದೇಶದಲ್ಲಿ ಭಾನುವಾರ 5 ಮರಿಗಳಿಗೆ ಜನ್ಮ ನೀಡಿದೆ.
ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭುಪೇಂದರ್ ಯಾದವ್ ಈ ವಿಷಯವನ್ನು ಹಂಚಿಕೊಂಡಿದ್ದು, ಹೊಸ ಮರಿಗಳ ಆಗಮನದೊಂದಿಗೆ ಚೀತಾಗಳ ಒಟ್ಟಾರೆ ಸಂಖ್ಯೆ 26ಕ್ಕೆ ಏರಿಕೆಯಾದಂತಾಗಿದೆ.
ದಕ್ಷಿಣ ಆಫ್ರಿಕಾದಿಂದ ಕರೆ ತರಲಾಗಿದ್ದ ಸುಮಾರು 5 ವರ್ಷದ ಚೀತಾ ಗಾಮಿನಿ 5 ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಜನಿಸಿದ ಚೀತಾಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಸಚಿವ ಭುಪೇಂದರ್ ಸಾಮಾಜಿಕ ಜಾಲತಾಣ `ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.