ಪ್ರಧಾನಿ ಮೋದಿ ಅವರ ತವರೂರಾದ ಗುಜರಾತ್ ನ ಸೂರತ್ ನಲ್ಲಿ ಮುಖೇಶ್ ದಲಾಲ್ ಅವಿರೋಧ ಆಯ್ಕೆಯಾಗಿದ್ದರಿಂದ ಬಿಜೆಪಿ ಲೋಕಸಭಾ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದಿದೆ.
ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಬಾನಿ ಅವರ ನಾಮಪತ್ರ ತಿರಸ್ಕೃಗೊಂಡರೆ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 25 ಮಂದಿ ನಾಮಪತ್ರ ಪಡೆದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಲೇಶ್ ಕುಂಬಾನಿ ಸಲ್ಲಿಸಿದ್ದ ನಾಮಪತ್ರದಲ್ಲಿ ಮೂರು ಕಡೆ ಮೂರು ರೀತಿಯ ಸಹಿ ಇರುವ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮೂರು ಬಾರಿ ಅವಕಾಶ ನೀಡಿದರೂ ಲೋಪ ಸರಿಪಡಿಸಿಕೊಳ್ಳದ ಕಾರಣ ನಿಲೇಶ್ ಕುಂಬಾನಿ ಅವರ ನಾಮಪತ್ರವನ್ನು ತಿರಸ್ಕೃತಗೊಳಿಸಲಾಯಿತು.