ಮಹಿಳೆ ಮೇಲೆ ಬಿಎಂಡಬ್ಲ್ಯೂ ಕಾರು ಹರಿಸಿ ಆಕೆಯ ಸಾವಿಗೆ ಕಾರಣರಾದ ಶಿವಸೇನಾ ಮುಖಂಡನ ಪುತ್ರನ ವಿರುದ್ಧ ಮುಂಬೈ ಪೊಲೀಸರು ಲುಕೌಟ್ ನೋಟಿಸ್ ಮಾಡಿದ್ದಾರೆ.
ಅತ್ಯಂತ ವೇಗವಾಗಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಮೃತಪಟ್ಟಿದ್ದರು. ಅಪಘಾತ ನಡೆಸಿ ಪರಾರಿಯಾಗಿರುವ ಪುತ್ರ ಮಿಹಿರ್ ಶಾಹ್ ನ ಬಂಧನಕ್ಕೆ ಪ್ರಯತ್ನಿಸುತ್ತಿರುವ ಪೊಲೀಸರು ವಿದೇಶಕ್ಕೆ ಹಾರದಂತೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಇದೇ ವೇಳೆ ಆಡಳಿತಾರೂಢ ಮೈತ್ರಿ ಪಕ್ಷದಲ್ಲಿ ಮುಖ್ಯಮಂತ್ರಿ ಏಕಾಂತ್ ಶಿಂಧೆ ಬಣದ ಶಿವಸೇನೆಯ ಪಾಲ್ಗರ್ ಜಿಲ್ಲೆಯ ಮುಖಂಡ ಆಗಿರುವ ರಾಜೇಶ್ ಚಾಹ್ ಅವರನ್ನು ಅಪಘಾತ ಮಾಡಿ ನಾಪತ್ತೆಯಾಗಿರುವ ಪುತ್ರನ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹಡಗು ಅಥವಾ ವಿಮಾನದ ಮೂಲಕ ವಿದೇಶಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಒಂದು ವೇಳೆ ಪ್ರಯತ್ನಿಸಿದರೆ ವಲಸೆ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಅಲ್ಲದೇ ಈ ರೀತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮತ್ತಷ್ಟು ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಿಹಿರ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸ್ಕೂಟಿ ಮೇಲೆ ಹರಿಸಿದ್ದಾನೆ. ಪತ್ನಿ ಮೃತಪಟ್ಟರೆ, ಪತಿ ಗಾಯಗೊಂಡಿದ್ದರು. ಅಲ್ಲದೇ ಕಾರಿಗೆ ಸಿಲುಕಿದ ಪತ್ನಿಯನ್ನು 100 ಮೀ.ವರೆಗೂ ಎಳೆದುಕೊಂಡು ಹೋಗಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ತಂದೆಯನ್ನು ಪೊಲೀಸರು ಬಂಧಿಸಿದ್ದರೂ ಪುತ್ರ ಮಿಹಿರ್ ಶಾಹ್ ಪೊಲೀಸರಿಗೆ ಇನ್ನೂ ಶರಣಾಗದೇ ತಲೆಮರೆಸಿಕೊಂಡಿದ್ದಾನೆ.