ಈನಾಡು, ಈಟಿವಿ, ರಾಮೋಜಿ ಫಿಲ್ಮಿಸಿಟಿ ಒಡೆಯ, ಮಾಧ್ಯಮ ಲೋಕದ ದಿಗ್ಗಜ ಚೆರುಕುರಿ ರಾಮೋಜಿರಾವ್ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮೋಜಿರಾವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ಬೆಳಿಗ್ಗೆ 4.50ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಪದ್ಮವಿಭೂಷಣ್ ಪ್ರಶಸ್ತಿ ಪುರಸ್ಕೃತ ರಾಮೋಜಿರಾವ್ ಅವಿಭಜಿತ ಆಂಧ್ರಪ್ರದೇಶದ ನಂ.1 ದಿನಪತ್ರಿಕೆ ಆಗಿತ್ತು. 1974ರಲ್ಲಿ ಈ ನಾಡು ಆರಂಭಿಸಿದ್ದ ರಾಮೋಜಿರಾವ್, ಈಟಿವಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ದಿಗ್ಗಜರೆನಿಸಿಕೊಂಡರು. ಇದೇ ವೇಳೆ ಉಷಾಕಿರಣ್ ಮೂವಿಸ್ ಮೂಲಕ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದೂ ಅಲ್ಲದೇ ರಾಮೋಜಿ ಫಿಲ್ಮ್ ಸಿಟಿ ಸ್ಥಾಪಿಸಿ ಚಲನಚಿತ್ರಗಳ ನಿರ್ಮಾಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದರು.
ರಾಮೋಜಿರಾವ್ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮರ್ಮು, ಪ್ರಧಾನಿ ನರೇಂದ್ರ ಮೋದಿ, ಚಂದ್ರಬಾಬು ನಾಯ್ಡು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.