ರಾಜನ ಶಕ್ತಿಯ ಬಗ್ಗೆ ನಾನು ಪ್ರಸ್ತಾಪಿಸಿರುವುದು ಪ್ರಧಾನಿ ಮೋದಿ ಅವರಿಗೆ ನಿಜ ಎಂಬುದು ಗೊತ್ತಿದೆ. ಆದ್ದರಿಂದಲೇ ನನ್ನ ಹೇಳಿಕೆಯನ್ನು ಮೋದಿ ತಿರುಚುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ರಾಜನ ನಿಜವಾದ ಶಕ್ತಿಯ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದರು. ಮೋದಿ ಶಕ್ತಿ ಪದವನ್ನು ಬಳಸಿಕೊಂಡು ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಶಕ್ತಿ ಪದವನ್ನು ಮೋದಿ ತಿರುಚಿದ್ದಾರೆ. ಆದರೆ ಅವರಿಗೆ ನಾನು ಹೇಳಿದ ಸತ್ಯದ ಬಗ್ಗೆ ಗೊತ್ತಿದೆ ಎಂದು ಹೇಳಿದರು.
ಶಕ್ತಿ ಪದ ವಿವಾದಕ್ಕೆ ತಿರುಗಿಸಿದ್ದಾರೆ. ಆದರೆ ನಾನು ಹೇಳಿದ್ದು, ರಾಜನ ನಿಜವಾದ ಶಕ್ತಿ ಇರುವುದು ಇವಿಎಂನಲ್ಲಿ ಇವಿಎಂನಲ್ಲಿ ಶಕ್ತಿ ಇರುವುದರಿಂದ ಅದನ್ನು ಬಳಸಿಕೊಂಡು ಇಡಿ, ಐಟಿ, ಸಿಬಿಐಗಳಲ್ಲಿಯೂ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂಬುದು. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೊತ್ತಿರುವ ವಿಷಯ ಎಂದು ರಾಹುಲ್ ಹೇಳಿದರು.