ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು 8 ಕ್ಯಾರೆಟ್ ವಜ್ರದ ಮೇಲೆ ಚಿತ್ರಿಸುವ ಮೂಲಕ ಗುಜರಾತ್ ನ ಸೂರತ್ ವಜ್ರದ ವ್ಯಾಪಾರಿ ಜೊತೆಗಿರುವ ಕುಶಲಕರ್ಮಿಗಳು ಗಮನ ಸೆಳೆದಿದ್ದಾರೆ.
ವಜ್ರದ ಮೇಲೆ ಮೋದಿ ಭಾವಚಿತ್ರ ನಿರ್ಮಿಸಿದ್ದು, 40 ಕ್ಯಾರೆಟ್ ಲೆಬ್ರಾನ್ ವಜ್ರದ ಮೇಲೆ ಭಾವಚಿತ್ರ ಕೆತ್ತಲಾಗಿದ್ದು, ಆಕಾರಕ್ಕಾಗಿ ಕತ್ತರಿಸಿ ರೂಪ ಕೊಟ್ಟ ನಂತರ ಅದು 8 ಕ್ಯಾರೆಟ್ ಗೆ ಇಳಿದಿದೆ ಎಂದು ವಜ್ರ ನಿರ್ಮಿಸಿದ ಸೂರತ್ ನ ಎಸ್ ಕೆ ಕಂಪನಿ ಹೇಳಿಕೊಂಡಿದೆ.
ವಜ್ರದ ಮೇಲೆ ಮೋದಿ ಭಾವಚಿತ್ರ ನಿರ್ಮಿಸುವ ಕಾರ್ಯದಲ್ಲಿ ಸುಮಾರು 20 ಕುಶಲ ಕರ್ಮಿಗಳು ತೊಡಗಿಸಿಕೊಂಡಿದ್ದರು. ಇವರು ಸುಮಾರು ಒಂದು ತಿಂಗಳ ಕಾಲ ಶ್ರಮ ವಹಿಸಿ ವಜ್ರಕ್ಕೆ ಅಂತಿಮ ರೂಪ ನೀಡಿದ್ದಾರೆ ಎಂದು ಕಂಪನಿ ಹೇಳಿದೆ.
ವಜ್ರವನ್ನು ಮೇಕ್ ಇನ್ ಇಂಡಿಯಾ ಮಾದರಿಯಲ್ಲಿ ರಚಿಸಲಾಗಿದ್ದು ಇದು ಪರಿಸರ ಸ್ನೇಹಿ ಕೂಡ ಆಗಿದೆ. ಈ ವಜ್ರವನ್ನು ಸೂರತ್ ನಲ್ಲಿ ನಡೆದ ವಜ್ರದ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕಂಪನಿ ವ್ಯವಸ್ಥಾಪಕರು ಹೇಳಿದರು.
ಆಭರಣ ಪ್ರದರ್ಶನ ಮಳಿಗೆಗೆ ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಕೂಡ ಭೇಟಿ ನೀಡಿದ್ದರು.