Thursday, December 25, 2025
Google search engine
Homeಅಪರಾಧಮದುವೆ ಆದ 2 ವಾರದಲ್ಲೇ ಸುಪಾರಿ ಕೊಟ್ಟು ಪತಿ ಕೊಲ್ಲಿಸಿದ ಪತ್ನಿ!

ಮದುವೆ ಆದ 2 ವಾರದಲ್ಲೇ ಸುಪಾರಿ ಕೊಟ್ಟು ಪತಿ ಕೊಲ್ಲಿಸಿದ ಪತ್ನಿ!

ಮನೆಯವರು ಇಷ್ಟವಿಲ್ಲದ ಮದುವೆ ಮಾಡಿದ್ದಕ್ಕಾಗಿ ಮಹಿಳೆ ಪ್ರಿಯಕರನ ಜೊತೆಗೂಡಿ ಮದುವೆ ಆದ 2 ವಾರದಲ್ಲೇ ಪತಿಯನ್ನು ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಔರೈಯಾ ಜಿಲ್ಲೆಯಲ್ಲಿ ದಿಲೀಪ್ ಎಂಬಾತನನ್ನು ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕೊಲೆ ಮಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪ್ರಗತಿ ಮತ್ತು ಅನುರಾಗ್ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಯನ್ನು ಒಪ್ಪದ ಪೋಷಕರು ಮಾರ್ಚ್ 5ರಂದು ಪ್ರಗತಿಯನ್ನು ದಿಲೀಪ್ ಜೊತೆ ಇಷ್ಟವಿಲ್ಲದೇ ಇದ್ದರೂ ಮದುವೆ ಮಾಡಿಸಿದ್ದರು.

ಮಹಿಳೆಯೊಬ್ಬರು ಪ್ರಿಯಕರನ ಜೊತೆ ಸೇರಿ ಯೋಜನೆ ರೂಪಿಸಿ ಗಂಡನನ್ನು ಹತ್ಯೆ ಮಾಡಿಸಲು ವ್ಯಕ್ತಿಯೊಬ್ಬನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಗುಂಡೇಟಿನಿಂದ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದ ದಿಲೀಪ್‌ನನ್ನು ಪೊಲೀಸರು ಗುರುತಿಸಿದ್ದರು. ತಕ್ಷಣ ಆತನನ್ನು ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ ಹಲವಾರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ದಿಲೀಪ್ ಮೃತಪಟ್ಟ.

ಮೃತ ವ್ಯಕ್ತಿಯ ಸಹೋದರ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತನ ಪತ್ನಿ ಮತ್ತು ಆಕೆಯ ಪ್ರೇಮಿ ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ, ಇಬ್ಬರೂ ಸೇರಿಕೊಂಡು ದಿಲೀಪ್‌ನನ್ನು ಕೊಲ್ಲಲು ನಿರ್ಧರಿಸಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ.

ಇಬ್ಬರೂ ದಿಲೀಪ್‌ನನ್ನು ಕೊಲೆ ಮಾಡಲು ರಾಮಾಜಿ ಚೌಧರಿ ಎಂಬ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದರು. ಕೊಲೆ ಮಾಡಲು ಅವನಿಗೆ 2 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಿಲೀಪ್‌ ನನ್ನು ಬೈಕ್‌ನಲ್ಲಿ ಹೊಲಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಂತರ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಗುರುತಿಸಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್‌ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ವಶಪಡಿಸಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments