ಸೊಳ್ಳೆ ಪರದೆಯನ್ನು ಹಿಡಿದು ಜನರಿಗೆ ಕಾಟ ಕೊಡುತ್ತಿದ್ದ ಚಿರತೆ ಹಿಡಿಯಲು ಹೊರಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಶ್ಯಾಮಲಾಲ್ ದ್ವಿವೇದಿ ಚಿರತೆಯನ್ನು ಹಿಡಿಯಲು ಸ್ಥಳೀಯರ ಜೊತೆ ತಾವೇ ಖುದ್ದು ಕಾರ್ಯಾಚರಣೆಗೆ ಇಳಿದಿದ್ದು, ಸೊಳ್ಳೆ ಪರದೆ ಬೀಸಿ ಚಿರತೆ ಹಿಡಿಯಲು ಹೊರಟಿರುವ ವೀಡಿಯೋ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಗೂಳಿ ಹಾಗೂ 5 ಜನರ ಮೇಲೆ ದಾಳಿ ಮಾಡಿದೆ. ಜನರಲ್ಲಿ ಆತಂಕ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಚಿರತೆಯನ್ನು ನಾವೇ ಹಿಡಿಯಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಚಿರತೆ ದಾಳಿ ಮಾಡಿದ ಜಾಗಕ್ಕೆ ದ್ವಿವೇದಿ ಹಾಗೂ ಸ್ಥಳೀಯರು ಸೊಳ್ಳೆ ಪರದೆ ಹಿಡಿದು ಹೊರಟ ವೀಡಿಯೋಗಳನ್ನು ಸೆರೆ ಹಿಡಿಯಲಾಗಿದ್ದು, ಸೊಳ್ಳೆ ಪರದೆಯಿಂದ ಬಲೆ ಬೀಸಿ ಚಿರತೆ ಹಿಡಿಯಲು ಸಾಧ್ಯವೇ ಎಂಬ ಪ್ರಶ್ನೆ ಕುರಿತು ಚರ್ಚೆಗಳು ನಡೆದಿವೆ.