ಬಾಲ್ಕನಿ ಮೇಲಿಂದ ಎರಡು ಮಕ್ಕಳನ್ನು ಎಸೆದು ಕೊಂದು ಆತ್ಮಹತ್ಯೆಗೆ ತಾಯಿ ಯತ್ನಿಸಿದ ಘಟನೆ ಡಮನ್ ನಲ್ಲಿ ನಡೆದಿದೆ.
ಡಮನ್ ಜಿಲ್ಲೆಯ ಡಲ್ವಾಡಾದಲ್ಲಿ ಈ ಘಟನೆ ಸಂಭವಿಸಿದ್ದು, ಗಂಡನ ಜೊತೆಗಿನ ಜಗಳದಿಂದ ಅಸಮಾಧಾನಗೊಂಡ ಪತ್ನಿ ಸೀಮಾ ಯಾದವ್ ಇಬ್ಬರು ಮಕ್ಕಳನ್ನು ಬಾಲ್ಕನಿ ಮೇಲಿಂದ ಎಸೆದು ತಾನು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಹಡಿಯ ನಾಲ್ಕನೇ ಅಂತಸ್ತಿನಿಂದ 3 ವರ್ಷದೊಳಗಿನ ಮಕ್ಕಳು ಕೆಳಗೆ ಬಿದ್ದಿದ್ದಾರೆ ಎಂದು ಮೋತಿ ದಮನ್ ಸಮುದಾಯದಿಂದ ಸೋಮವಾರ ರಾತ್ರಿ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದೆವು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬರುವಷ್ಟರಲ್ಲಿ ನೆಲದ ಮೇಲೆ ಬಿದ್ದಿದ್ದ ಮಕ್ಕಳು ಮೃತಪಟ್ಟಿದ್ದವು. ಸೀಮಾ ಯಾದವ್ ಗಂಡನ ಮೇಲಿಂದ ಸಿಟ್ಟಿನಿಂದ ಮಕ್ಕಳನ್ನು ಬಾಲ್ಕನಿಯಿಂದ ಎಸೆದಿದ್ದಾಳೆ. ನಂತರ ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಗಂಡ ಆಕೆಯನ್ನು ಹಿಡಿದು ರಕ್ಷಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.