ಕೆಲವು ತಿಂಗಳ ಹಿಂದೆ ದಿಢೀರನೆ ತಲೆಗೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದ ಮಹಾರಾಷ್ಟ್ರದ ಈ ಗ್ರಾಮದ ಜನರು ಇದೀಗ ಉಗುರು ಉದುರುವ ಸಮಸ್ಯೆಯಿಂದ ಕಂಗಲಾಗಿದ್ದಾರೆ.
ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆಲವು ತಿಂಗಳ ಹಿಂದೆ ಜನರು ದಿಢೀರನೆ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಇದೇ ಗ್ರಾಮಗಳ ಜನರು ಉಗುರು ಉದುರುತ್ತಿರುವ ಸಮಸ್ಯೆ ಎದುರಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಕನಿಷ್ಠ ನಾಲ್ಕು ಗ್ರಾಮಗಳಲ್ಲಿ 29ಕ್ಕೂ ಹೆಚ್ಚು ಜನರ ಏಕಾಏಕಿ ಉಗುರು ಉದುರಿವೆ. ದಿಢೀರನೆ ಉಗುರು ತುಂಡಾಗುವುದು ಹಾಗೂ ಉದುರಿ ಹೋಗುತ್ತವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಹಿಂದೆ ಕೂದಲು ಸಮಸ್ಯೆಗೆ ಗ್ರಾಮದ ಜನರು ಬಳಸುತ್ತಿರುವ ಗೋಧಿ ಹಿಟ್ಟಿನಲ್ಲಿ ಬಳಸುವ ರಾಸಾಯನಿಕ ಅಂಶ ಕಾರಣ ಎಂದು ಹೇಳಲಾಗಿತ್ತು. ಆದರೆ ಇದೀಗ ಉಗುರು ಉದುರುವ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇನೆಂದು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಶೆಂಗೊನ್ ತಾಲೂಕಿನ ಗ್ರಾಮದ ಜನರಲ್ಲಿ ಹೆಚ್ಚಾಗಿ ಉಗುರು ಉದುರುವ ಸಮಸ್ಯೆ ಕಾಣಿಸಿಕೊಂಡಿದೆ. ಉದುರಿದು ಉಗುರು ಹಾಗೂ ಆ ವ್ಯಕ್ತಿಗಳ ಮಾದರಿಗಳನ್ನು ಸಂಗ್ರಹಿಸಿ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ಶೆಂಗೂನ್ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಈ ಉಗುರು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮೊದಲೆರಡು ದಿನ ಉಗುರು ಒಡೆದು ಹೋಗುತ್ತಿತ್ತು. ನಂತರ ಇಡೀ ಉಗುರು ಉದುರಿ ಹೋಗುತ್ತಿದೆ ಎಂದು ಗ್ರಾಮಸ್ಥರು ವಿವರಿಸಿದ್ದಾರೆ.


