Saturday, May 30, 2026
Google search engine
Homeದೇಶಸಿವಿಲ್‌ ನ್ಯಾಯಾಧೀಶ ಆಕಾಂಕ್ಷಿ ರೈಲಿನಲ್ಲಿ ನಿಗೂಢ ಕಣ್ಮರೆ!

ಸಿವಿಲ್‌ ನ್ಯಾಯಾಧೀಶ ಆಕಾಂಕ್ಷಿ ರೈಲಿನಲ್ಲಿ ನಿಗೂಢ ಕಣ್ಮರೆ!

ಸಿವಿಲ್‌ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿಯಾಗಿದ್ದ 29 ವರ್ಷದ ಯುವತಿ ರೈಲಿನಲ್ಲಿ ಪ್ರಯಾಣದ ವೇಳೆ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇಂದೋರ್‌ ನಿಂದ ಕಾಂತಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅರ್ಚನಾ ತಿವಾರಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ. ಅರ್ಚನಾ ನಾಪತ್ತೆಯಾಗುವ ಮುನ್ನ ಸಂಪರ್ಕದಲ್ಲಿದ್ದ ಪೊಲೀಸ್‌ ಕಾನ್‌ ಸ್ಟೇಬಲ್‌ ಹುದ್ದೆಯ ಆಕಾಂಕ್ಷಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅರ್ಚನಾ ತಿವಾರಿ ಸೋದರ ದಿವ್ಯಾಂಶು ಮಿಶ್ರಾ, ಸೋದರಿ ಬದುಕಿದ್ದಾರೆ. ಆಕೆಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಮುಖ್ಯವಾದ ಸುಳಿವು ದೊರೆತಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅರ್ಚನಾ ತಾನು ಇರುವ ಸ್ಥಳದ ಮಾಹಿತಿಯನ್ನು ತಾಯಿ ಜೊತೆ ಹಂಚಿಕೊಂಡಿದ್ದಾರೆ. ಆಕೆ ಇರುವ ಲೋಕೇಶನ್‌ ಗೆ ಪೊಲೀಸರು ತೆರಳಲಿದ್ದಾರೆ ಎಂದು ಅವರು ಹೇಳಿದರು.

ಅರ್ಚನಾ ಪದವೀಧರೆಯಾಗಿದ್ದು, ಆಗಸ್ಟ್‌ ೭ರಂದು ನಡೆಯಲಿರುವ ಸಿವಿಲ್‌ ನ್ಯಾಯಾಧೀಶ ಹುದ್ದೆಯ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಭೋಪಾಲ್‌ ನಿಂದ ರಾತ್ರಿ 10.15ಕ್ಕೆ ತೆರಳುವ ಮುನ್ನ ತಾಯಿ ಜೊತೆ ಮಾತನಾಡಿದ್ದಳು. ನಂತರ ಆಕೆ ಸಂಪರ್ಕಕ್ಕೆ ಸಿಲುಕಿಲ್ಲ ಎಂದು ಸೋದರ ಹೇಳಿದ್ದಾನೆ.

ರೈಲು ಹತ್ತಿದ ನಂತರ ಅರ್ಚನಾ ಸಂಪರ್ಕಕ್ಕೆ ಸಿಲುಕಿಲ್ಲ. ಅಲ್ಲದೇ ಉಮಾರಿಯಾ ನಿಲ್ದಾಣದ ಬಳಿ ಅಕೆಯ ಲಗೇಜ್‌ ಪತ್ತೆಯಾಗಿದೆ. ಆದರೆ ಭೋಪಾಲ್‌ ನ ರಾಣಿ ಕಮಲಾಪತಿ ನಿಲ್ದಾಣದ ಬಳಿ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಆದರೆ ಇಟಾರ್ಸಿ ಬಳಿ ಕೊನೆಯ ಬಾರಿಗೆ ಇಂಟರ್‌ ನೆಟ್‌ ಸಂಪರ್ಕ ಹೊಂದಿದ್ದು ತಿಳಿದು ಬಂದಿದೆ.

ಬುದಿನಿ ಮತ್ತು ಬಾರ್ಕೆಡಾ ನಡುವಿನ ಪರ್ವತಗಳ ನಡುವಿನ ಹಾದಿಯ ನಡುವೆ ಆಕೆ ನಾಪತ್ತೆಯಾಗಿದ್ದಾಳೆ.
ಪೊಲೀಸರು ಕರೆ ಮಾಹಿತಿ ಹಾಗೂ ಮೊಬೈಲ್‌ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದ್ದು, ನಾಪತ್ತೆಯಾದ ಜಾಗದಲ್ಲಿ ಶ್ವಾನದಳ ಆಗಮಿಸಿದ್ದು, 97 ಸಿಸಿಟಿವಿಗಳ ದೃಶ್ಯಗಳ ಮಾಹಿತಿ ಸಂಗ್ರಹಿಸಿ ಶೋಧ ಕಾರ್ಯ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments