Thursday, May 14, 2026
Google search engine
Homeದೇಶಬೆಂಗಳೂರಿನ ಎಚ್‌ ಎಎಲ್‌ ನಿಂದ 97 ತೇಜಸ್ ಯುದ್ಧವಿಮಾನ ಖರೀದಿಗೆ 62,000 ಕೋಟಿ ಬಿಡುಗಡೆಗೆ ಕೇಂದ್ರ...

ಬೆಂಗಳೂರಿನ ಎಚ್‌ ಎಎಲ್‌ ನಿಂದ 97 ತೇಜಸ್ ಯುದ್ಧವಿಮಾನ ಖರೀದಿಗೆ 62,000 ಕೋಟಿ ಬಿಡುಗಡೆಗೆ ಕೇಂದ್ರ ಸಮ್ಮತಿ

ಸ್ವದೇಶೀ ನಿರ್ಮಿತ 97 ಎಲ್‌ ಸಿಎ ಮಾರ್ಕ್‌ 1ಎ (ತೇಜಸ್) ಯುದ್ಧ ವಿಮಾನ ಖರೀದಿಗೆ ಕೇಂದ್ರ ಸಮ್ಮತಿ ಸೂಚಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೇಕ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಮತ್ತಷ್ಟು ಉತ್ತೇಜನ ನೀಡಿದ್ದಾರೆ.

ಆಪರೇಷನ್‌ ಸಿಂಧೂರ್‌ ಯಶಸ್ವಿ ಕಾರ್ಯಾಚರಣೆಗೆ ಸ್ವದೇಶೀ ನಿರ್ಮಿತ ಕ್ಷಿಪಣಿಗಳು ಕಾರಣವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮೇಕ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರಗಳಿಗೆ ಉತ್ತೇಜನ ನೀಡಲು ನಿರ್ಧರಿಸಿದೆ.

ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ 97 ಎಲ್‌ ಸಿಎ ಮಾರ್ಕ್‌ 1ಎ ಯುದ್ಧ ವಿಮಾನ ಖರೀದಿಗೆ ಹಸಿರುನಿಶಾನೆ ತೋರಿದೆ.
ಬೆಂಗಳೂರಿನಲ್ಲಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ ಎಎಲ್) ನಿರ್ಮಿಸುತ್ತಿರುವ 97 ಎಲ್‌ ಸಿಎ ಮಾರ್ಕ್‌ 1ಎ ಯುದ್ಧ ವಿಮಾನ ಖರೀದಿಗೆ ಕೇಂದ್ರದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೆಲವು ವರ್ಷಗಳ ಹಿಂದೆ 43 ಎಲ್‌ ಸಿಎ 1ಎ ಯುದ್ಧವಿಮಾನವನ್ನು 48,000 ಕೋಟಿ ರೂ. ನೀಡಿ ಕೇಂದ್ರ ಖರೀದಿಸಿತ್ತು. ಇದೀಗ ಎರಡನೇ ಬಾರಿ ಕೇಂದ್ರ ಎಚ್‌ ಎಎಲ್‌ ಗೆ ದೊಡ್ಡ ಆರ್ಡರ್‌ ನೀಡಲು ಮುಂದಾಗಿದೆ.

ಮುಂದಿನ ತಿಂಗಳಿಂದ ಮಿಗ್‌ 21 ಯುದ್ಧ ವಿಮಾನಗಳನ್ನು ಬದಲಾಯಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಆ ಜಾಗಕ್ಕೆ ಎಲ್‌ ಸಿಎ 1ಎ ಯುದ್ಧವಿಮಾನ ನಿಯೋಜಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments