Sunday, June 28, 2026
Google search engine
Homeಅಪರಾಧಮಗನ ಮುಂದೆಯೇ ಗಂಡನ ಕೊಂದು ಶವ ಡ್ರಮ್‌ ನಲ್ಲಿ ಹಾಕಿದ ಪತ್ನಿ!

ಮಗನ ಮುಂದೆಯೇ ಗಂಡನ ಕೊಂದು ಶವ ಡ್ರಮ್‌ ನಲ್ಲಿ ಹಾಕಿದ ಪತ್ನಿ!

ಎಂಟು ವರ್ಷದ ಮಗನ ಮುಂದೆಯೇ ಪ್ರಿಯಕರನ ಜೊತೆಗೂಡಿ ಪತ್ನಿ, ಗಂಡನನ್ನು ಕೊಂದು ಡ್ರಮ್‌ ನಲ್ಲಿ ಶವ ತುಂಬಿ ಮನೆಯ ಮೇಲೆ ಬಿಸಾಡಿದ ಆಘಾತಕಾರಿ ಘಟನೆ ರಾಜಸ್ಥಾನ್‌ ನಲ್ಲಿ ನಡೆದಿದೆ.

ಖೈರತಾಲ್‌-ತಿಜಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 8 ವರ್ಷದ ಮಗ ಪ್ರಿಯಕರನ ಜೊತೆಗೂಡಿ ತಾಯಿ, ತನ್ನ ತಂದೆ ಹನ್ಸ್‌ ರಾಮ್‌ ನನ್ನು ಕೊಲೈಗೈದು ನೀಲಿ ಬಣ್ಣದ ಪ್ಲಾಸ್ಟಿಕ್‌ ಡ್ರಮ್‌ ನಲ್ಲಿ ತುಂಬಿ ಮನೆಯ ಮೇಲ್ಫಾವಣಿಯಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈತನ ಹೇಳಿಕೆ ಆಧರಿಸಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಗಂಡನನ್ನು ಕೊಂದು ಶವ ಬಚ್ಚಿಟ್ಟ ಪತ್ನಿ ಹಾಗೂ ಪ್ರಿಯಕರ ಉತ್ತರ ಪ್ರದೇಶದ ಶಹಜಾನ್‌ ಪುರದ ತಮ್ಮ ಮೂಲ ನೆಲೆಯಲ್ಲಿ ಮೂರು ಮಕ್ಕಳ ಜೊತೆ ತಲೆಮರೆಸಿಕೊಂಡಿದ್ದರು. ಪೊಲೀಸರು ಸುನೀತಾ ಹಾಗೂ ಪ್ರಿಯಕರ ಜಿತೇಂದ್ರ ಅವರನ್ನು ಬಂಧಿಸಿದ್ದಾರೆ.

ಕಿಶನ್‌ ಗಢ್‌ ನಲ್ಲಿ ದಂಪತಿ ಮೂರು ಮಕ್ಕಳ ಜೊತೆ ಕಟ್ಟಡದ ಮೇಲಿನ ರೂಫ್‌ ಟಾಪ್‌ ನಲ್ಲಿರುವ ಬಾಡಿಗೆ ಮನೆಯಲ್ಲಿ ಎರಡೂ ತಿಂಗಳ ಹಿಂದೆಯಷ್ಟೇ ಬಂದು ವಾಸವಾಗಿದ್ದರು. ಹನ್ಸ್‌ ರಾಜ್‌ ಸ್ಥಳೀಯ ಇಟ್ಟಿಗೆ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಮಹಡಿ ಮನೆಯಿಂದ ಗಬ್ಬು ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಡ್ರಮ್‌ ನಲ್ಲಿ ಬಚ್ಚಿಟ್ಟಿದ್ದ ಶವ ಪತ್ತೆಯಾಗಿದೆ. ಶವ ಬೇಗ ಹಾಳಾಗಲಿ, ವಾಸನೆ ಬರಬಾರದು ಎಂಬ ಕಾರಣಕ್ಕೆ ಉಪ್ಪು ಸುರಿದಿದ್ದರು.

ತನಿಖೆ ನಡೆಸಿದ ಪೊಲೀಸರು ಮತ್ತೊಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀತಾ ಹಾಗೂ ಜಿತೇಂದ್ರ ಹಾಗೂ ಮೂರು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ೮ ವರ್ಷದ ಮಗ ತಂದೆಯನ್ನು ಕೊಂದು ನೀಲಿ ಬಣ್ಣದ ಡ್ರಮ್‌ ನಲ್ಲಿ ಹಾಕಿದ್ದನ್ನು ನೋಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಈ ಮೂಲಕ ಕೊಲೆ ಪ್ರಕರಣ ದೃಢಪಟ್ಟಿದೆ.

ಕೊಲೆಯಾದ ದಿನ ಜಿತೇಂದ್ರ ಹಾಗೂ ಕೊಲೆಯಾದ ತಂದೆ ಒಟ್ಟಿಗೆ ಕುಡಿಯುತ್ತಾ ಕುಳಿತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿಯನ್ನು ಹನ್ಸ್‌ ರಾಮ್‌ ಥಳಿಸಲು ಆರಂಭಿಸಿದ್ದಾನೆ. ಆಗ ಜಿತೇಂದ್ರ ಮಧ್ಯಪ್ರವೇಶಿಸಿದ್ದು, ಹೊಡೆದಾಟ ನಡೆದಿದೆ. ಈ ವೇಳೆ ತಂದೆ ಚಲನೆ ಇಲ್ಲದೇ ಮಲಗಿದ್ದು, ಮಾರನೇ ದಿನ ಬೆಳಿಗ್ಗೆ ತಾಯಿ ಹಾಗೂ ಜಿತೇಂದ್ರ ಡ್ರಮ್‌ ನಲ್ಲಿ ನೀರು ಮತ್ತು ಉಪ್ಪು ಹಾಕಿ ತುಂಬಿಸಿ ಮಹಡಿಯ ಮೇಲೆ ಬಚ್ಚಿಟ್ಟಿದ್ದಾರೆ.

ತಂದೆ ಹಲವು ಬಾರಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದು, ಒಂದು ಬಾರಿ ಸಿಗರೇಟ್‌ ನಿಂದ ಸುಟ್ಟಿದ್ದ. ಇದೇ ವೇಳೆ ಜಿತೇಂದ್ರ ಪದೇಪದೆ ಮನೆಗೆ ಬರುವುದು ಗೊತ್ತಾಗುತ್ತಿದ್ದಂತೆ ಹನ್ಸ್‌ ರಾಜ್‌ ಸಿಟ್ಟು ಹೆಚ್ಚಾಗಿದ್ದು, ತಾಯಿಯ ಮೇಲೆ ಹಲ್ಲೆ ಹೆಚ್ಚಾಗಿತ್ತು ಎಂದು ಮಗ ಹೇಳಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments