Sunday, June 28, 2026
Google search engine
Homeರಾಜ್ಯದಲಿತರ ಒಳಮೀಸಲಾತಿ 6-6-5 ಮಾದರಿಯಲ್ಲಿ ಹಂಚಿಕೆ: ಸಚಿವ ಸಂಪುಟ ಮಹತ್ವದ ನಿರ್ಧಾರ

ದಲಿತರ ಒಳಮೀಸಲಾತಿ 6-6-5 ಮಾದರಿಯಲ್ಲಿ ಹಂಚಿಕೆ: ಸಚಿವ ಸಂಪುಟ ಮಹತ್ವದ ನಿರ್ಧಾರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಎಡಗೈ, ಬಲ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಲಾಗಿದ್ದು, ಬಲಗೈ ಹಾಗೂ ಎಡಗೈ ಸಮುದಾಯಕ್ಕೆ ತಲಾ  ಶೇ.6, ಮತ್ತು ಇತರೆ ಸಮುದಾಯಕ್ಕೆ ಶೇ.5ರಂತೆ ಒಳಮೀಸಲಾತಿ ನೀಡಲು ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ.

ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಆಯೋಗದ ವರದಿಯಂತೆ ಎಸ್ ಸಿ ಸಮುದಾಯವನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿತ್ತು. ಗುಂಪು 1 ಅತೀ ಹಿಂದುಳಿದ ಜಾತಿಗಳು ಶೇ.1, ಗುಂಪು 2 ಎಡಗೈ ಜಾತಿಗಳು ಶೇ 6, ಗುಂಪು 3 ಬಲಗೈ ಜಾತಿಗಳು ಶೇ.5, ಗುಂಪು 4 ಬಂಜಾರ, ಬೋವಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) ಶೇ.4, ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಶೇ.1 ಎಂದು ವರ್ಗೀಕರಣ ಮಾಡಿತ್ತು.

ಸಂಪುಟ ಸಭೆಯಲ್ಲಿ ಎಡ, ಬಲ ಹಾಗೂ ಇತರೆ ಎಂದು ಮೂರು ವಿಂಗಡನೆ ಮಾಡಿ ಮರುವರ್ಗೀಕರಿಸಿ ಒಳಮೀಸಲಾತಿ ಮರುಹಂಚಿಕೆಗೆ ತೀರ್ಮಾನಿಸಲಾಗಿದೆ.

ಪರಿಶಿಷ್ಟ ಜಾತಿ ಸಮುದಾಯದ ಎಡಗೈ ಗುಂಪಿಗೆ 6%,, ಬಲ ಗೈ ಗುಂಪಿಗೆ 6% ಮತ್ತು ಇತರೆ (ಸ್ಪರ್ಶಿಯರು, ಅಲೆಮಾರಿ ಗುಂಪು)ಗೆ 5% ಒಳಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಹೊಸ ವರ್ಗೀಕರಣದಂತೆ ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದ್ದ ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಯನ್ನು ಬಲಗೈ ಗುಂಪಿಗೆ ಸೇರಿಸಲಾಗಿದೆ. ಆ ಮೂಲಕ ಬಲ ಗೈ ಗುಂಪಿಗೆ ಇದ್ದ 5% ಒಳ ಮೀಸಲಾತಿಯನ್ನು 6%ಕ್ಕೆ ಏರಿಕೆ ಮಾಡಲಾಗಿದೆ.

ಗುಂಪು 4 ಬಂಜಾರ, ಬೋವಿ, ಲಂಬಾಣಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) (ಶೇ.4)ನ್ನು ಇತರೆ ಗುಂಪು ಎಂದು ವರ್ಗೀಕರಿಸಿ 5% ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಇತರೆ ಗುಂಪಿಗೆ ಅತಿ ಹಿಂದುಳಿದ ಜಾತಿ, ಅಲೆಮಾರಿ ಸಮುದಾಯವನ್ನು ಸೇರಿಸಲಾಗಿದೆ. ಆ ಮೂಲಕ ಪರಿಶಿಷ್ಟ ಜಾತಿ ಸನುದಾಯಗಳ ದಶಕಗಳ ಒಳಮೀಸಲಾತಿ ಕಾಯುವಿಕೆಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಯತ್ನಿಸಿದೆ.

ನ್ಯಾ.ನಾಗಮೋಹನ್ ದಾಸ್ ವರದಿ ಪ್ರಕಾರ 101 ಪ.ಜಾತಿಗಳ ಕ್ರೋಢೀಕೃತ ವಿವರ

ಪ್ರವರ್ಗ- Aಯಲ್ಲಿ 59 ಉಪ ಜಾತಿ- 5,22,099 ಒಟ್ಟು ಜನಸಂಖ್ಯೆ

ಪ್ರವರ್ಗ- B (ಎಡಗೈ) 18 ಉಪಜಾತಿ- ಒಟ್ಟು 36,69,246 ಜನಸಂಖ್ಯೆ

ಪ್ರವರ್ಗ- C (ಬಲಗೈ) 17 ಉಪಜಾತಿ- ಒಟ್ಟು ಜನಸಂಖ್ಯೆ 30,08,633 ಇದೆ. ಪ್ರವರ್ಗ- Dಯಲ್ಲಿ 4 ಉಪಜಾತಿಗಳಿದ್ದು, 28,34,939 ಜನಸಂಖ್ಯೆ ಪ್ರವರ್ಗ- E (ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ) 3 ಉಪಜಾತಿ- 4,74,954 ಜನಸಂಖ್ಯೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments