Home ದೇಶ ಟಿಬೆಟ್-ನೇಪಾಳ ಗಡಿಯಲ್ಲಿ ಭೂಕಂಪ; 126ಕ್ಕೇರಿದ ಸಾವಿನ ಸಂಖ್ಯೆ 200 ಮಂದಿಗೆ ಗಾಯ

ಟಿಬೆಟ್-ನೇಪಾಳ ಗಡಿಯಲ್ಲಿ ಭೂಕಂಪ; 126ಕ್ಕೇರಿದ ಸಾವಿನ ಸಂಖ್ಯೆ 200 ಮಂದಿಗೆ ಗಾಯ

ಟಿಬೆಟ್: ನೆರೆಯ ನೇಪಾಳ ಗಡಿ ಭಾಗಕ್ಕೆ ಅಂಟಿಕೊಂಡಿರುವ ಟಿಬೆಟ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 200 ದಾಟಿದೆ.

by Editor
0 comments
earthquack

ಟಿಬೆಟ್: ನೆರೆಯ ನೇಪಾಳ ಗಡಿ ಭಾಗಕ್ಕೆ ಅಂಟಿಕೊಂಡಿರುವ ಟಿಬೆಟ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 126ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 200 ದಾಟಿದೆ.

ಹಿಮಾಲಯ ಪ್ರದೇಶ ವ್ಯಾಪ್ತಿಯ ಮೌಂಟ್ ಎವರೆಸ್ಟ್ ಪರ್ವತಕ್ಕೆ ಸಮೀಪದಲ್ಲಿರುವ ಭೂಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ನೇಪಾಳದ ಲಾಬ್ಚೆ ಎಂಬಲ್ಲಿಂದ ಸುಮಾರು 93 ಕಿಲೋ ಮೀಟರ್ ದೂರದ ಚೀನಾದ ಟಿಬೆಟ್‌ನಲ್ಲಿ ವ್ಯಾಪಿಸಿರುವ ಪರ್ವತ ಗಡಿ ಪ್ರದೇಶಗಳಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೇ ಮಾಹಿತಿ ನೀಡಿದೆ.

ಸುಮಾರು 200 ಕಿಲೋ ಮೀಟರ್ ದೂರದ ದೇಶದ ಆಗ್ನೇಯ ದಿಕ್ಕಿನಲ್ಲಿರುವ ಕಠ್ಮಂಡುವಿನಲ್ಲಿ ಕಟ್ಟಡಗಳು ನಡುಗಿವೆ. ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ ಎಂದು ತಿಳಿದು ಬಂದಿದೆ.

ರಿಕ್ಟರ್ ಮಾಪಕದಲ್ಲಿ 6.8ರ ತೀವ್ರತೆ ದಾಖಲಾಗಿದ್ದು, 10 ಕಿ.ಮೀ. (6.2 ಮೈಲುಗಳು) ಆಳದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 9.05 ಗಂಟೆಗೆ (01:05 ನಿಮಿಷ) ಭೂಕಂಪ ಸಂಭವಿಸಿದೆ.

banner

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಕಂಪದ ತೀವ್ರತೆ 7.1 ಆಗಿದೆ. ಇಂದು ಮಧ್ಯಾಹ್ನ ವೇಳೆಗೆ ಮೃತಪಟ್ಟವರ ಸಂಖ್ಯೆ 126ಕ್ಕೆ ಏರಿಕೆಯಾಗಿದ್ದು, 200 ಜನರು ಗಾಯಗೊಂಡಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.

ಭೂಕಂಪದ ಪ್ರಭಾವವಾಗಿ, ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಉತ್ತರ ಭಾಗಗಳಲ್ಲಿ, ವಿಶೇಷವಾಗಿ ಬಿಹಾರದಲ್ಲಿ ಕಂಪನಗಳು ಕಂಡುಬಂದವು. ಅಲ್ಲಿ ಜನರು ತಮ್ಮ ಮನೆಗ ಳಿಂದ ಹೊರಗೆ ಓಡುತ್ತಿರುವುದನ್ನು ಕಾಣಬಹುದು. ಆದರೆ, ಅಲ್ಲಿ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಬಿಹಾರದಲ್ಲೂ ಕಂಪನ: ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಭಾರತ-ನೇಪಾಳ ಗಡಿಯಲ್ಲಿರುವ ಪಾಟ್ನಾ, ಮಧುಬನಿ, ಶೆಯೋಹರ್, ಮುಂಗೇರ್, ಸಮಸ್ತಿಪುರ್, ಮುಜಾಫರ್ಪುರ್, ಕತಿಹಾರ್, ದರ್ಬಂಗಾ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್ ಮತ್ತು ಹಲವಾರು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ.

ಭೂಕಂಪ ಸಂಭವಿಸಿದಾಗ ಕತಿಹಾರ್, ಪೂರ್ಣೆಯಾ, ಶಿಯೋಹರ್, ದರ್ಬಂಗಾ ಮತ್ತು ಸಮಸ್ತಿಪುರದಲ್ಲಿ ಜನರು ಮನೆಗಳಿಂದ ಹೊರಬಂದಿದ್ದಾರೆ.

ಭೂಕಂಪನ ಬೆಳಗ್ಗೆ 6.35 ಕ್ಕೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ವರದಿ ಮಾಡಿದೆ. 4.7 ರ ತೀವ್ರತೆಯ ಎರಡನೇ ಭೂಕಂಪವು 10 ಕಿಮೀ ಆಳದಲ್ಲಿ 7:02ಕ್ಕೆ ದಾಖಲಾಗಿದ್ದರೆ, 7:07 ಕ್ಕೆ 4.9 ರ ತೀವ್ರತೆಯ ಮೂರನೇ ಭೂಕಂಪವು 30 ಕಿಮೀ ಆಳದಲ್ಲಿ ದಾಖಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬೆಂಗಳೂರು-ತುಮಕೂರು-ರಾಮನಗರ ವರ್ತುಲ ರಸ್ತೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಮ್ಮತಿ ಶರಣಾದ 6 ಮಂದಿ‌ ನಕ್ಸಲರ ಸಶಸ್ತ್ರ ಹೋರಾಟದ ಹಿಂದಿನ ನೋವಿನ ಕಥೆ ಏನು ಗೊತ್ತಾ? ಮಂಗಳೂರಿನಲ್ಲಿ ಸಮುದ್ರಪಾಲಾದ ಬೆಂಗಳೂರಿನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು! ಸಿಎಂ ಸಮ್ಮುಖದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು: 24 ವರ್ಷಗಳಲ್ಲೇ ಇದೇ ಮೊದಲು! ಬೆಂಗಳೂರು: ಪತ್ನಿ, ಇಬ್ಬರು ಮಕ್ಕಳನ್ನು ಕೊಲೆಗೈದ ಹೋಂಗಾರ್ಡ್! ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಇಂದಿನಿಂದಲೇ ಬಿಎಂಟಿಸಿ ಬಸ್ ಪಾಸ್ ದರ ಹೆಚ್ಚಳ! ಬೆಂಗಳೂರಿನಲ್ಲಿ ಭೀಕರ ಘಟನೆ : ಪತ್ನಿ, ಇಬ್ಬರು ಮಕ್ಕಳ ಕೊಂದ ಪತಿ! ದೇಶಾದ್ಯಂತ ವಾಹನ ಅಪಘಾತದ ಗಾಯಾಳುಗಳಿಗೆ ಉಚಿತ ಚಿಕಿತ್ಸೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ 20,000 ರೂ.ಗೆ 18 ದಿನ ಉತ್ತರ ಭಾರತ ಪ್ರವಾಸ: MSIL ಟೂರ್ ಪ್ಯಾಕೇಜ್ ಗೆ ಚಾಲನೆ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ: ಹೆಚ್ಚುವರಿ 2 ಗಂಟೆ ವಿದ್ಯುತ್ ಪೂರೈಸಲಿರುವ ರಾಜ್ಯ ಸರ್ಕಾರ!