Home ಅಪರಾಧ ಪೊಲೀಸರ ಸಮ್ಮುಖದಲ್ಲೇ ಮಗಳಿಗೆ ಗುಂಡಿಕ್ಕಿ ಕೊಂದ ತಂದೆ!

ಪೊಲೀಸರ ಸಮ್ಮುಖದಲ್ಲೇ ಮಗಳಿಗೆ ಗುಂಡಿಕ್ಕಿ ಕೊಂದ ತಂದೆ!

ಮದುವೆಗೆ ನಾಲ್ಕು ದಿನ ಮುನ್ನ ಪೊಲೀಸರು ಹಾಗೂ ಪಂಚಾಯತ್ ಮುಖಂಡರ ಸಮ್ಮುಖದಲ್ಲೇ ಮಗಳನ್ನು ತಂದೆಯೊಬ್ಬ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

by Editor
0 comments
fathet kills daughter

ಮದುವೆಗೆ ನಾಲ್ಕು ದಿನ ಮುನ್ನ ಪೊಲೀಸರು ಹಾಗೂ ಪಂಚಾಯತ್ ಮುಖಂಡರ ಸಮ್ಮುಖದಲ್ಲೇ ಮಗಳನ್ನು ತಂದೆಯೊಬ್ಬ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಮನೆಯಲ್ಲಿ ನೋಡಿದ ಹುಡುಗನ ಜೊತೆ ಮದುವೆ ಆಗಲು ನಿರಾಕರಿಸಿದ 20 ವರ್ಷದ ಪುತ್ರಿ ತನು ಗುರ್ಜಾರ್ ಎಂಬಾಕೆಯನ್ನು ಆಕೆಯ ತಂದೆಯೇ ಎಲ್ಲರ ಸಮ್ಮುಖದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ನಗರದ ಗೋಲಾ ಕಾ ಮಂದಿರದಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮಹೇಶ್ ಗುಜ್ಜಾರ್ ಸ್ವದೇಶೀ ನಿರ್ಮಿತ ಪಿಸ್ತೂಲಿನಿಂದ ಅತೀ ಸಮೀಪದಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ಮಗಳು ಸತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾನೆ.

ಕೊಲೆಗೂ ಕೆಲವೇ ಗಂಟೆಗಳ ಮುನ್ನ ತನು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿ ಮನೆಯಲ್ಲಿ ನನಗೆ ಇಷ್ಟವಿಲ್ಲದವರ ಜೊತೆ ಮದುವೆಗೆ ಬಲವಂತ ಮಾಡುತ್ತಿದ್ದಾರೆ. ನಾನು ನನಗೆ ಇಷ್ಟ ಆದವರನ್ನು ಮದುವೆ ಆಗುತ್ತೇನೆ ಹೊರತು ಯಾರ ಬಲವಂತಕ್ಕೆ ಅಲ್ಲ ಎಂದು ತಂದೆ ಹಾಗೂ ಕುಟುಂಬದ ಕೆಲವರ ಹೆಸರು ಪ್ರಸ್ತಾಪಿಸಿದ್ದಳು.

banner

ನಾನು ವಿಕ್ಕಿ ಎಂಬಾತನನ್ನು ಮದುವೆ ಆಗುತ್ತೇನೆ. ಆರಂಭದಲ್ಲಿ ಮನೆಯಲ್ಲಿ ಒಪ್ಪಿಗೆ ನೀಡಿದ್ದರು. ನಂತರ ನಿರಾಕರಿಸಿದರು. ಈ ಕಾರಣಕ್ಕಾಗಿ ದಿನ ನನಗೆ ಹೊಡೆಯುತ್ತಿದ್ದರು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಿದ್ದಳು.

ತನು ಮತ್ತು ದೆಹಲಿಯ ಆಗ್ರಾದ ನಿವಾಸಿ ವಿಕ್ಕಿ 6 ವರ್ಷಗಳಿಂದ ಪ್ರೀತಿಸುತ್ತಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿ ಮನೆಗೆ ಹೋಗಿ ರಾಜೀ ಸಂಧಾನ ಮಾಡುತ್ತಿದ್ದರು. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಕೂಡ ಇದ್ದರು. ಈ ವೇಳೆ ದಿಢೀರನೆ ಪಿಸ್ತೂಲು ತೆಗೆದು ತಂದೆ ಗುಂಡಿಕ್ಕಿ ತಂದೆ ಹತ್ಯೆ ಮಾಡಿದ್ದಾನೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಸಚಿವ ಕೃಷ್ಣ ಭೈರೇಗೌಡಗೆ ಸಂಕಷ್ಟ: ಕಂದಾಯ ಇಲಾಖೆ ಭ್ರಷ್ಟಾಚಾರ ತನಿಖೆಗೆ ರಾಜ್ಯಪಾಲರಿಗೆ ದೂರು! ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ ಕೆಡಿಎಂ ಕುಂಭ ಡಿಜಿಟಲ್ ಮೇಳ: 90 ಕಡೆ ಮೊಬೈಲ್ ಚಾರ್ಜಿಂಗ್ ಶಿಬಿರ! ಕನ್ನಡ ಚಿತ್ರರಂಗ ಖ್ಯಾತ ಹಾಸ್ಯ ನಟ, ರಂಗಕರ್ಮಿ ಸರಿಗಮ ವಿಜಿ ಇನ್ನಿಲ್ಲ ಒನ್‌ಪ್ಲಸ್ ಪರಿಚಯಿಸುತ್ತಿದೆ ಒನ್‌ಪ್ಲಸ್ 13 ಸೀರೀಸ್ ಗಾಗಿ ಫೋನ್ ಬದಲಿ ಪ್ಲಾನ್! ಕಲಬುರಗಿಯಲ್ಲಿ 17 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಕುಳಿತಲ್ಲೇ ಹೃದಯಾಘಾತದಿಂದ ಸಾವು ಮೈಸೂರು ಆಸ್ಪತ್ರೆಗೆ ನಟ ದರ್ಶನ್ ಭೇಟಿ: 3 ದಿನದಲ್ಲಿ ಶಸ್ತ್ರಚಿಕಿತ್ಸೆ? ಪೊಲೀಸರ ಸಮ್ಮುಖದಲ್ಲೇ ಮಗಳಿಗೆ ಗುಂಡಿಕ್ಕಿ ಕೊಂದ ತಂದೆ! ನೌಕಾಪಡೆಗೆ ತ್ರಿಶಕ್ತಿ: 3 ಐಎನ್ ಎಸ್ ಯುದ್ಧ ನೌಕೆ ಲೋಕಾರ್ಪಣೆ ಮಾಡಿದ ಪ್ರಧಾನಿ! ಬಿಸಿಸಿಐನಿಂದ ಮೇಜರ್ ಸರ್ಜರಿ: ಆಟಕ್ಕೆ ತಕ್ಕಂತೆ ಆದಾಯ, ಸಂಗಾತಿ ಪ್ರವೇಶ ನಿರ್ಬಂಧ!