ನವದೆಹಲಿ: ಟೂತ್ ಪೇಸ್ಟ್, ಬಟ್ಟೆ, ಶೂ, ಎಲೆಕ್ಟ್ರಿಕ್ ವಸ್ತು ಸೇರಿದಂತೆ ಹಲವು ವಸ್ತುಗಳ ಮೇಲಿನ ಜಿಎಸ್ ಟಿ ರದ್ದು ಅಥವಾ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇತ್ತೀಚೆಗೆ ಬಜೆಟ್ ನಲ್ಲಿ ಆದಾಯ ತೆರಿಗೆ ಮೇಲೆ ರಿಯಾಯಿತಿ ಘೋಷಿಸಿದ ನಂತರ ಇದೀಗ ಮಧ್ಯಮ ವರ್ಗದವರ ದಿನಬಳಕೆಯ ವಸ್ತುಗಳ ಮೇಲಿನ ಜಿಎಸ್ ಟಿ ಕಡಿತಗೊಳಿಸಲು ಚಿಂತನೆ ನಡೆಸಿದ್ದಾರೆ.
ಜುಲೈ ತಿಂಗಳ ಕೊನೆಯಲ್ಲಿ ಜಿಎಸ್ ಟಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಜಿಎಸ್ ಟಿ ಕಡಿತಕ್ಕೆ ರಾಜ್ಯ ಸರ್ಕಾರಗಳು ಸಹಮತ ವ್ಯಕ್ತಪಡಿಸಬೇಕಾಗಿದೆ. ಒಂದು ವೇಳೆ ಒಮ್ಮತ ವ್ಯಕ್ತವಾಗದೇ ಇದ್ದರೆ ಮತದಾನದ ಮೂಲಕ ಅಂಗೀಕಾರ ಪಡೆಯಲಾಗುತ್ತದೆ. ಜಿಎಸ್ ಟಿ ಕಡಿತದ ಬಗ್ಗೆ ಕೇಂದ್ರ 15 ದಿನಗಳ ಮುಂಚಿತವಾಗಿ ರಾಜ್ಯಗಳಿಗೆ ಮಾಹಿತಿ ನೀಡಬೇಕಾಗಿದೆ.
ಮಧ್ಯಮ ವರ್ಗದವರ ದಿನಬಳಕೆಯ ವಸ್ತುಗಳ ಮೇಲೆ ಈಗ ವಿಧಿಸಲಾಗುತ್ತಿರುವ ಶೇಕಡಾ 12ರಷ್ಟು ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಅಥವಾ ಶೇ.5ಕ್ಕೆ ಇಳಿಕೆ ಮಾಡುವ ಬಗ್ಗೆ ಮುಂದಿನ ಜಿಎಸ್ ಟಿ ಸಭೆಯಲ್ಲಿ ತೀರ್ಮಾನ ಪ್ರಕಟಿಸಲಿದೆ.
ಮಧ್ಯಮ ಹಾಗೂ ಕೆಳವರ್ಗದ ಜನರು ಬಳಸುವ ಟೂತ್‌ಪೇಸ್ಟ್ ಮತ್ತು ಹಲ್ಲಿನ ಪುಡಿ, ಛತ್ರಿ, ಹೊಲಿಗೆ ಯಂತ್ರ, ಪ್ರೆಶರ್ ಕುಕ್ಕರ್ ಮತ್ತು ಅಡುಗೆ ಪಾತ್ರೆ, ಎಲೆಕ್ಟ್ರಿಕ್ ಐರನ್, ಗೀಸರ್‌ಗಳು, ಸಣ್ಣ ಸಾಮರ್ಥ್ಯದ ತೊಳೆಯುವ ಯಂತ್ರ, ಬೈಸಿಕಲ್, 1,000 ರೂ.ಗಿಂತ ಹೆಚ್ಚು ಬೆಲೆಯ ಸಿದ್ಧ ಉಡುಪುಗಳು, 500 ರಿಂದ 1,000 ರೂ. ಬೆಲೆಯ ಪಾದರಕ್ಷೆ, ಸ್ಟೇಷನರಿ ವಸ್ತು, ಲಸಿಕೆ, ಸೆರಾಮಿಕ್ ಟೈಲ್ಸ್ ಮತ್ತು ಕೃಷಿ ಉಪಕರಣಗಳ ಮೇಲಿನ ಜಿಎಸ್ ಟಿ ಕಡಿತ ಮಾಡಲು ಚಿಂತನೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಮಧ್ಯಮ ಹಾಗೂ ಕೆಳ ವರ್ಗದ ಜನರು ಬಳಸುವ ದಿನಬಳಕೆಯ ವಸ್ತುಗಳ ಮೇಲಿನ ಜಿಎಸ್ ಟಿ ಕಡಿತಗೊಳಿಸುವುದರಿಂದ ಕೇಂದ್ರ ಸರ್ಕಾರದ ಮೇಲೆ 40,000 ದಿಂದ 50,000 ಕೋಟಿ ರೂ.ವರೆಗೆ ಹೊರೆ ಬೀಳುವ ನಿರೀಕ್ಷೆ ಇದೆ. ಆದರೆ ಇದು ಆರಂಭಿಕ ಹೊರೆಯಾಗಲಿದ್ದು, ತೆರಿಗೆ ಕಡಿತದಿಂದ ವ್ಯಾಪಾರ ಹೆಚ್ಚಾದಂತೆ ಹೊರೆ ಕಡಿಮೆ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಶೇ.12ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿರುವ ವಸ್ತುಗಳ ಪಟ್ಟಿ ಇಲ್ಲಿದೆ.
ಹಲ್ಲಿನ ಪುಡಿ
ಸ್ಯಾನಿಟರಿ ನ್ಯಾಪ್‌ಕಿನ್‌ಗಳು (ಮೂಲತಃ ತೆರಿಗೆ ವಿಧಿಸಲಾಗುತ್ತಿತ್ತು, ಈಗ ಶೇಕಡಾ 0, ಆದರೆ ಸಂಬಂಧಿತ ಸ್ತ್ರೀ ನೈರ್ಮಲ್ಯ ವಸ್ತುಗಳು ಇನ್ನೂ ಶೇಕಡಾ 12 ಕ್ಕಿಂತ ಕಡಿಮೆ ಇರಬಹುದು)
ಕೂದಲಿನ ಎಣ್ಣೆ
ಸೋಪ್‌ಗಳು (ಕೆಲವು ವಿಭಾಗಗಳು, ಇತರವುಗಳು ಶೇಕಡಾ 18)
ಟೂತ್‌ಪೇಸ್ಟ್ (ಕೆಲವು ಬ್ರಾಂಡ್ ರೂಪಾಂತರಗಳು ಶೇಕಡಾ 12, ಇತರವು ಶೇಕಡಾ 18)
ಛತ್ರಿ
ಹೊಲಿಗೆ ಯಂತ್ರ
ವಾಟರ್ ಫಿಲ್ಟರ್ ಮತ್ತು ಪ್ಯೂರಿಫೈಯರ್ (ವಿದ್ಯುತ್ ರಹಿತ ವಿಧಗಳು)
ಪ್ರೆಶರ್ ಕುಕ್ಕರ್
ಅಲ್ಯೂಮಿನಿಯಂ, ಉಕ್ಕಿನಿಂದ ಮಾಡಿದ ಅಡುಗೆ ಪಾತ್ರೆ (ಕೆಲವು ಶೇಕಡಾ 12)
ಎಲೆಕ್ಟ್ರಿಕ್ ಐರನ್
ವಾಟರ್ ಹೀಟರ್ (ಗೀಸರ್‌ಗಳು)
ವ್ಯಾಕ್ಯೂಮ್ ಕ್ಲೀನರ್ (ಕಡಿಮೆ ಸಾಮರ್ಥ್ಯ, ವಾಣಿಜ್ಯೇತರ)
ವಾಷಿಂಗ್ ಮೆಷಿನ್ (ಸಣ್ಣ ಸಾಮರ್ಥ್ಯ)
ಬೈಸಿಕಲ್
ಅಂಗವಿಕಲರಿಗೆ ವ್ಯಾಗನ್
ಸಾರ್ವಜನಿಕ ಸಾರಿಗೆ ವಾಹನಗಳು (ಮಾರಾಟ ಮಾಡಿದಾಗ, ದರಕ್ಕೆ ಅಲ್ಲ)
ರೆಡಿಮೇಡ್ ಉಡುಪು (ರೂ 1,000 ಕ್ಕಿಂತ ಹೆಚ್ಚು ಬೆಲೆ) ರೂ 500-1,000 ರೂ. ನಡುವಿನ ಬೆಲೆಯ ಪಾದರಕ್ಷೆ
ಹೆಚ್ಚಿನ ಲಸಿಕೆಗಳು
ಎಚ್‌ಐವಿ, ಹೆಪಟೈಟಿಸ್, ಟಿಬಿ ರೋಗನಿರ್ಣಯ ಕಿಟ್‌ಗಳು
ಆಯುರ್ವೇದ ಮತ್ತು ಯುನಾನಿ ಔಷಧಿಗಳು
ವ್ಯಾಯಾಮ ಪುಸ್ತಕ
ಜ್ಯಾಮಿಟ್ರಿ ಪೆಟ್ಟಿಗೆಚಿತ್ರಕಲೆ ಮತ್ತು ಬಣ್ಣ ಪುಸ್ತಕಗಳು
ನಕ್ಷೆಗಳು ಮತ್ತು ಗೋಳ
ಮೆರುಗುಗೊಳಿಸಲಾದ ಅಂಚುಗಳು (ಮೂಲ, ಐಷಾರಾಮಿ ಅಲ್ಲದ ರೂಪಾಂತರಗಳು)
ಸಿದ್ಧ-ಮಿಶ್ರ ಕಾಂಕ್ರೀಟ್, ಟೈಲ್ಸ್
ಪೂರ್ವ-ನಿರ್ಮಿತ ಕಟ್ಟಡಗಳು
ಯಾಂತ್ರಿಕ ಥ್ರೆಷರ್‌ಗಳಂತಹ ಕೃಷಿ ಉಪಕರಣಗಳು
ಮಂದಗೊಳಿಸಿದ ಹಾಲು, ಹೆಪ್ಪುಗಟ್ಟಿದ ತರಕಾರಿಗಳು (ಕೆಲವು ರೂಪಾಂತರಗಳು) ಮುಂತಾದ ಪ್ಯಾಕ್ ಮಾಡಿದ ಆಹಾರಗಳು
ಸೋಲಾರ್ ಫಲಕಗಳು


