ಕಮಾಂಡರ್ ಸೇರಿದಂತೆ 7 ಮಾವೋವಾದಿಗಳನ್ನು ಭದ್ರತಾ ಪಡೆಗಳು ಎನ್ ಕೌಂಟರ್ ಮಾಡಿದ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಪೊಲೀಸ್ ಮಾಹಿತಿದಾರ ಎನ್ನಲಾದ ಬುಡಕಟ್ಟು ಜನಾಂಗದ ವ್ಯಕ್ತಿಯ ಹತ್ಯೆ ಘಟನೆ ನಡೆದ ವಾರದ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲರ ಬೇಟೆಯಾಡಿದ್ದಾರೆ.
ಭಾನುವಾರ ಮುಂಜಾನೆ ನಕ್ಸಲರು ಹೆಚ್ಚಾಗಿ ಸಂಚರಿಸುವ ಪ್ರದೇಶ ಎಂದು ಗುರುತಿಸಲಾದ ಚಲ್ಪಕಾ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಮಾವೊವಾದಿ (ಸಿಪಿಐ) ಸಂಘಟನೆಯ ಯೆಲ್ಲನಾಡು-ನರಸಿಂಹಪೇಟ್ ವಿಭಾಗದ ಕಮಾಂಡರ್ ಭದ್ರು ಅಲಿಯಾಸ್ ಕುರ್ಸಾಮ್ ಮಂಗು, ಎಗೊಲಪ್ಪು ಮಲ್ಲೇಶ್, ಮುಸ್ಸಾಕೈ ದೇವಲ್, ಮುಸ್ಸಾಕಿ ಜಮುನಾ, ಜೈ ಸಿಂಗ್, ಕಿಶೋರ್, ಕಾಮೇಶ್ ಹತ್ಯೆಯಾದವರು.
ಮೃತ ನಕ್ಸಲರ ಬಳಿ ಎಕೆ-47, ಜಿ3, ಐಎನ್ ಎಸ್ ಎಸ್ ರೈಫಲ್ಸ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.