ಕೋವಿಡ್-19 ಮಹಾಮಾರಿ ಅಬ್ಬರದ ವೇಳೆ ಕೆರೆಬಿಯನ್ ಗೆ ನೀಡಿದ ಸಹಕಾರವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡೊಮೆನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕಾಮನ್ ವೆಲ್ತ್ ಆಫ್ ಡೊಮೆನಿಕಾ ನೀಡಿ ಗೌರವಿಸಲಿದೆ.
ಭಾರತ ಮತ್ತು ಡೊಮೆನಿಕಾ ನಡುವಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಅಮೆರಿಕಾದ ದ್ವೀಪ ರಾಷ್ಟ್ರವಾದ ಡೊಮೆನಿಕಾ ನವೆಂಬರ್ ೨೦ರಂದು ಪ್ರಶಸ್ತಿ ನೀಡಿ ಗೌರವಿಸುವುದಾಗಿ ಘೋಷಿಸಿದೆ.
ಡೊಮೆನಿಕಾದ ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಕಾಮನ್ವೆಲ್ತ್ ಆಫ್ ಡೊಮೆನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರಮೋದಿ ಅವರಿಗೆ ನೀಡುತ್ತಿದ್ದು, ಕೋವಿಡ್-19 ಸಮಯದಲ್ಲಿ ಅವರು ಡೊಮಿನಿಕಾಗೆ ನೀಡಿದ ಕೊಡುಗೆಗಳನ್ನು ಗುರುತಿಸುತ್ತದೆ. ಸಾಂಕ್ರಾಮಿಕ ಮತ್ತು ಭಾರತ ಮತ್ತು ಡೊಮಿನಿಕಾ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಅವರ ಸಮರ್ಪಣೆಯನ್ನು ಸರಿಸುತ್ತದೆ ಎಂದು ಹೇಳಿದೆ.