ಮಣಿಪುರದಲ್ಲಿ ಅರಜಾಕತೆ ಮತ್ತು ಸಂಭಾಲ್ ಗಲಭೆ ಕುರಿತು ಪ್ರತಿಪಕ್ಷಗಳು ಸೋಮವಾರವೂ ಏರುಧ್ವನಿಯಲ್ಲಿ ಚರ್ಚೆಗೆ ಆಗ್ರಹಿಸಿ ಪಟ್ಟು ಹಿಡಿದಿದ್ದರಿಂದ ಚಳಿಗಾಲದ ಸಂಸತ್ ಅಧಿವೇಶನದ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಚಳಿಗಾಲದ ಅಧಿವೇಶನ ಆರಂಭವಾದಗಿನಿಂದ ಈ ಎರಡು ಪ್ರರಕಣಗಳ ಕುರಿತು ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಸೋಮವಾರವೂ ತಮ್ಮ ಪಟ್ಟು ಮುಂದುವರಿಸಿದರು. ಇದರಿಂದ ಯಾವುದೇ ಚರ್ಚೆ ಇಲ್ಲದೇ ಸತತ ೬ನೇ ದಿನವೂ ಲೋಸಕಭೆ ಮತ್ತು ರಾಜ್ಯಸಭಾ ಕಲಾಪಗಳು ರದ್ದುಗೊಂಡಿವೆ.
ಸೋಮವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಭಾರತ ಮತ್ತು ಚೀನಾ ಗಡಿ ವಿವಾದ ಕುರಿತು ವಿವರಣೆ ನೀಡಬೇಕಿತ್ತು. ಆದರೆ ಪ್ರತಿಪಕ್ಷಗಳು ಉತ್ತರಕ್ಕೆ ಅವಕಾಶ ನೀಡದೇ ಎರಡು ವಿಷಯಗಳ ಚರ್ಚೆಗೆ ಆಗ್ರಹಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಕರಾವಳಿಯ ಶಿಪ್ಪಿಂಗ್, ಬ್ಯಾಂಕಿಂಗ್ ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ ಈಗಾಗಲೇ ವಕ್ಫ್ ಮಸೂದೆಯನ್ನು ಜೆಪಿಸಿ ಪರಾಮರ್ಶೆಗೆ ಕಳುಹಿಸುವ ಮೂಲಕ ಮತ್ತೆ ಮುಂದೂಡಿದೆ.