ಕೊಲೆ ಮಾಡಿ ಡ್ರಮ್ ನಲ್ಲಿ ತುಂಬಬಹುದು ಎಂಬ ಭಯದಿಂದ ಪ್ರಿಯಕರನ ಜೊತೆ ಪತ್ನಿಯನ್ನು ಧಾರೆ ಎರೆದುಕೊಟ್ಟಿದ್ದ ಗಂಡ ಇದೀಗ ಮರಳಿದ ಬಂದ ಪತ್ನಿಯನ್ನು ಸ್ವೀಕರಿಸಿದ್ದಾರೆ.
ಪ್ರಿಯಕರನ ಜೊತೆ ಮದುವೆ ಗಂಡ ಮದುವೆ ಮಾಡಿಸಿದ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಮುಂದೆ ಯಾವ ಟ್ವಿಸ್ಟ್ ಪಡೆಯುತ್ತದೆ ಎಂದು ನಿರೀಕ್ಷಿಸುವುದು ಕೂಡ ಸಾಧ್ಯವಾಲ್ಲದಷ್ಟು ತಿರುವು ಪಡೆಯುತ್ತಿದೆ.
ಪತ್ನಿ ರಾಧಿಕಾ ವಿಕಾಸ್ ಎಂಬಾತನ ಜೊತೆ ಲವ್ವಲ್ಲಿ ಬಿದ್ದಿರುವುದನ್ನು ತಿಳಿದ ಪತಿ ಬಬ್ಲೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಪತ್ನಿಗೆ ಪ್ರಿಯಕರನ ಜೊತೆ ಮದುವೆ ಮಾಡಿಸಿದ. ಕಾರಣ ಕೇಳಿದರೆ ಮೀರತ್ ನಲ್ಲಿ ಇತ್ತೀಚೆಗೆ ಪ್ರಿಯಕರನ ಜೊತೆ ಸೇರಿ ಪತ್ನಿಯನ್ನು ಕೊಂದ ಪತ್ನಿ ಡ್ರಮ್ ನಲ್ಲಿ ಶವ ಇಟ್ಟು ಸೀಮೆಂಟ್ ತುಂಬಿಸಿದಂತೆ ನನ್ನನ್ನೂ ಕೊಲ್ಲಬಹುದು ಎಂದು ಹೇಳಿಕೊಂಡಿದ್ದ.
ಮಾರ್ಚ್ 25ರಂದು ವಿಕಾಸ್ ಜೊತೆ ಪತ್ನಿ ರಾಧಿಕಾಳನ್ನು ಮದುವೆ ಮಾಡಿಸಿಕೊಟ್ಟ ಬಬ್ಲೂ ರಿಜಿಸ್ಟ್ರಾರ್ ಮದುವೆ ಮಾಡಿಸಿದ್ದ. ನಂತರ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಸಿದ್ದ.
ಇದೀಗ ರಾಧಿಕಾಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ಹೊಸ ಸೊಸೆ ಮಕ್ಕಳಿಗೆ ತಾಯಿಯ ಪ್ರೀತಿ ಅಗತ್ಯವಿದೆ ಎಂದು ಮನೆ ತುಂಬಿಸಿಕೊಳ್ಳಲು ನಿರಾಕರಿಸಿ ಮೊದಲ ಪತಿ ಬಳಿಯೇ ಕಳುಹಿಸಿಕೊಟ್ಟಿದ್ದಾರೆ. ಆದರೆ ವಾಪಸ್ ಬಂದ ಪತ್ನಿಯನ್ನು ಸ್ವೀಕರಿಸುವ ಮೂಲಕ ಬಬ್ಲೂ ಅಚ್ಚರಿ ಮೂಡಿಸಿದ್ದಾನೆ.
ಮಾರ್ಚ್ 28ರಂದು ವಿಕಾಸ್ ಮನೆಗೆ ಹೋದ ಬಬ್ಲೂ ಎರಡು ಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಆದ್ದರಿಂದ ರಾಧಿಕಾಳನ್ನು ವಾಪಸ್ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾನೆ. ಎರಡು ಮತ್ತು 7 ವರ್ಷದ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದರಿಂದ ವಿಕಾಸ್ ಮನೆಯವರು ರಾಧಿಕಾಳನ್ನು ವಾಪಸ್ ಕಳುಹಿಸಿಕೊಡಲು ಸಮ್ಮತಿಸಿದ್ದಾರೆ.
ವಿಕಾಸ್ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಬ್ಲೂ ಒತ್ತಾಯದ ಮೇರೆಗೆ ಮದುವೆ ಮಾಡಿಕೊಡಲು ಒಪ್ಪಿದ್ದರು. ಇದೀಗ ಪತ್ನಿ ಹಾಗೂ ಮಕ್ಕಳ ಜೊತೆ ಇರಲು ನಿರ್ಧರಿಸಿದ್ದೇನೆ. ಇನ್ನು ಮುಂದೆ ಯಾವುದೇ ಗೊಂದಲಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾನೆ.


