Tuesday, 17 November 2026 — Kannadavahini
BREAKING NEWS
ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ
ರಾಜ್ಯ

ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆ: ಇಂದಿನಿಂದಲೇ ಡಿಸೆಲ್ ದರ ಏರಿಸಿದ ಗ್ಯಾರಂಟಿ ಸರ್ಕಾರ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 25 ವೀಕ್ಷಣೆಗಳು
petrol diesel

ಬೆಂಗಳೂರು: ಹಾಲು, ನೀರು, ಬಸ್ ಸೇರಿದಂತೆ ಎಲ್ಲಾ ದರಗಳನ್ನು ಏರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಏಕಾಏಕಿ ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದ್ದು, ಏಪ್ರಿಲ್ 1ರಿಂದಲೇ ಲೀಟರ್ ಗೆ 2 ರೂ. ಜಾರಿಗೆ ಬರಲಿದೆ.

ರಾಜ್ಯ ಸರ್ಕಾರ ಡೀಸೆಲ್​ ಮೇಲಿನ ತೆರಿಗೆಯನ್ನು ಶೇ 2.73ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ, ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ.

ಡೀಸೆಲ್ ಮೇಲೆ ಈ ಹಿಂದೆ ಇದ್ದ ಶೇ. 18.44ರ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಡಿಸೇಲ್​ 88.99 ರೂ. ಮಾರಾಟವಾಗುತ್ತಿದ್ದು, 90 ರೂ. ಗಡಿ ದಾಟಲಿದೆ.

ಕರ್ನಾಟಕ ಸರ್ಕಾರ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿದ್ದು, ಇಂದಿನಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ವಿರೋಧ ಪಕ್ಷಗಳು ದರ ಏರಿಕೆಯನ್ನು ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ. ಇದರ ನಡುವೆಯೇ, ರಾಜ್ಯ ಸರ್ಕಾರ ಡೀಸೆಲ್​ ದರವನ್ನು 2 ರೂ. ನಷ್ಟು ಏರಿಕೆ ಮಾಡಿದ್ದ ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯ ಸರ್ಕಾರ ಕಳೆದ ವರ್ಷವೂ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ಏರಿಕೆ ಮಾಡಿತ್ತು. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿತ್ತು.

ರಾಜ್ಯ ಸರ್ಕಾರದ ದರ ಏರಿಕೆಯನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದೆ. ಬುಧವಾರದಿಂದ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ದರ ಏರಿಕೆಯನ್ನು ವಿರೋಧಿಸಿ ನಮ್ಮ ಹೋರಾಟ ಎಂದು ಬಿಜೆಪಿ ಹೇಳಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8422 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment