ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಜೆಟ್ ಮೇಲಿನ ಚರ್ಚೆ ವೇಳೆ `ಹಲ್ವಾ’ ತಯಾರಿಯ ಬಗ್ಗೆ ಪ್ರಸ್ತಾಪಿಸಿದ ವಿಷಯಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ನಾಚಿ ಮುಖ ಮುಚ್ಚಿಕೊಂಡ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ನಡೆದ ಲೋಕಸಭಾ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ, ಬಜೆಟ್ ನಲ್ಲಿ ವೈವಿದ್ಯತೆಯಿಲ್ಲ. ಮಧ್ಯಮ ವರ್ಗ, ಬಡವರು ಹಾಗೂ ಆದಿವಾಸಿಗಳನ್ನು ಕಡೆಗಣಿಸಲಾಗಿದೆ. ಬಜೆಟ್ ಪೂರ್ವದಲ್ಲಿ ಬಜೆಟ್ ಹಲ್ವಾ ತಯಾರಿಕೆಯಲ್ಲೂ ಇದನ್ನು ಗಮನಿಸಬಹುದು ಎಂದು ಆರೋಪಿಸಿದರು.
ಹಲ್ವಾ ತಯಾರಿಸುವ ಮೂಲಕ ಬಜೆಟ್ ಪ್ರಕ್ರಿಯೆಗೆ ಚಾಲನೆ ನೀಡಿದ್ದ ನಿರ್ಮಲಾ ಸೀತಾರಾಮನ್, ಹಲ್ವಾ ತಯಾರಿಕೆಯ ಫೋಟೊ ಪ್ರದರ್ಶಿಸಿದರು. ಈ ಚಿತ್ರದಲ್ಲಿ ಎಷ್ಟು ಬಡವರು, ಮಧ್ಯಮ ವರ್ಗದವರು, ಆದಿವಾಸಿಗಳು, ದಲಿತರು ಇದ್ದಾರೆ ತೋರಿಸಿ. ಹಲ್ವಾ ತಯಾರಿಕೆಯಲ್ಲೇ ಇವರನ್ನು ಕಡೆಗಣಿಸಿರುವ ವಿತ್ತ ಸಚಿವರು ಬಜೆಟ್ ನಲ್ಲೂ ಅವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಹಲ್ವಾ ಬಜೆಟ್ ತಯಾರಿಕೆಯ ಫೋಟೊಗಳನ್ನು ಪ್ರದರ್ಶಿಸಿದಾಗ ನಿರ್ಮಲಾ ಸೀತರಾಮನ್ ನಾಚಿಕೆಯಿಂದ ಮುಖ ಮುಚ್ಚಿಕೊಂಡರು. ನಂತರ ರಾಹುಲ್ ಗಾಂಧಿ ಭಾಷಣ ಮುಂದುವರಿಸಿದಾಗಲೂ ಅವರು ನಗು ನಗುತ್ತಾ ಭಾಷಣ ಆಲಿಸಿದರು.