Friday, November 22, 2024
Google search engine
Homeತಾಜಾ ಸುದ್ದಿಪೇಜರ್ ನಂತರ ಲೆಬೆನಾನ್ ನಲ್ಲಿ ವಾಕಿಟಾಕಿ, ಮೊಬೈಲ್ ಸ್ಫೋಟ: 9ಕ್ಕೇರಿದ ಸಾವಿನ ಸಂಖ್ಯೆ

ಪೇಜರ್ ನಂತರ ಲೆಬೆನಾನ್ ನಲ್ಲಿ ವಾಕಿಟಾಕಿ, ಮೊಬೈಲ್ ಸ್ಫೋಟ: 9ಕ್ಕೇರಿದ ಸಾವಿನ ಸಂಖ್ಯೆ

ಪೇಜರ್ ಬಾಂಬ್ ಸ್ಫೋಟದಿಂದ 9 ಮಂದಿ ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಬೆನ್ನಲ್ಲೇ ಇದೀಗ ಲೆಬೆನಾನ್ ನಲ್ಲಿ ಇದೀಗ ವಾಕಿ-ಟಾಕಿ ಮತ್ತು ಮೊಬೈಲ್ ಸ್ಫೋಟದ ದಾಳಿ ನಡೆದಿದೆ.

ಲೆಬೆನಾನ್ ನಲ್ಲಿರುವ ಇರಾನ್ ಬೆಂಬಲಿತ ಹೆಜಾಬುಲ್ಲಾ ಸೇನಾ ನೆಲೆ ಇರುವ ಬೈರತ್ ನಲ್ಲಿ ವಾಕಿ-ಟಾಕಿ ಬಾಂಬ್ ಗಳು ಸ್ಫೋಟಗೊಂಡಿದೆ. ಇದರಿಂದ 9 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಲೆಬೆನಾನ್ ನ ಹಲವೆಡೆ ಪೇಜರ್ ಗಳು ಸ್ಫೋಟಗೊಂಡ ಬೆನ್ನಲ್ಲೇ ವಾಕಿಟಾಕಿ, ಮೊಬೈಲ್ ಬಾಂಬ್ ಸ್ಫೋಟ ಸಂಭವಿಸಿದೆ. ಎಷ್ಟು ವಾಕಿ-ಟಾಕಿಗಳು ಸ್ಫೋಟಗೊಂಡಿವೆ ಎಂದು ತಿಳಿದು ಬಂದಿಲ್ಲ.

ಇರಾನ್ ಗುಪ್ತಚರರು ಲೆಬೆನಾನ್ ನಲ್ಲಿ ಪೇಜರ್ ಮತ್ತು ವಾಕಿಟಾಕಿ ದಾಳಿಯ ಹಿಂದಿನ ರೂವಾರಿಗಳು ಎಂದು ಶಂಕಿಸಲಾಗಿದ್ದು, ತೈವಾನ್ ನಿಂದ ಆಮದಾಗುವ ಪ್ರತಿ ಪೇಜರ್ ನಲ್ಲಿ 3 ಗ್ರಾಂನಷ್ಟು ಸ್ಫೋಟಕ ಭರ್ತಿ ಮಾಡಿ ಅದು ಹೆಚ್ಚು ಬಿಸಿ ಆಗುತ್ತಿದ್ದಂತೆ ಸ್ಫೋಟಗೊಳ್ಳುವ ರೀತಿ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಪೇಜರ್ ಸ್ಫೋಟದ ಹಿಂದೆ ತನ್ನ ಕೈವಾಡವಿಲ್ಲ ಎಂದು ತೈವಾನ್ ಸ್ಪಷ್ಟಪಡಿಸಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಹೆಜಾಬುಲ್ಲಾ ಸೇನಾ ನೆಲೆಗಳಲ್ಲಿ ಬಳಸುವ ವಾಕಿಟಾಕಿಗಳಲ್ಲಿ ಬಾಂಬ್ ಇರಿಸಿ ಸ್ಫೋಟ ಸಂಚು ರೂಪಿಸಲಾಗಿದೆ. ಇದೇ ರೀತಿ ಕೆಲವು ಮೊಬೈಲ್ ಗಳಲ್ಲೂ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments