ಭಾರತದ ನಿತೀಶ್ ಕುಮಾರ್ ಮತ್ತು ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪ್ರತ್ಯೇಕವಾಗಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ 2 ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.
ಭಾನುವಾರ ನಡೆದ ಪುರುಷರ ಎಸ್ ಎಲ್ 3 ವಿಭಾಗದಲ್ಲಿ ನಿತೀಶ್ ಕುಮಾರ್ ಮತ್ತು ಎಸ್ ಎಲ್ 4 ವಿಭಾಗದಲ್ಲಿ ಸುಹಾಸ್ ಯತಿರಾಜ್ ಫೈನಲ್ ಪ್ರವೇಶಿಸಿದ್ದಾರೆ.
ಭಾರತದ ಮತ್ತೊಬ್ಬ ಸ್ಪರ್ಧಿ ಸುಕಾಂತ್ ಕದಮ್ ಎಸ್ ಎಲ್ 4 ವಿಭಾಗದ ಸೆಮಿಫೈನಲ್ ನಲ್ಲಿ ಸುಹಾಸ್ ವಿರುದ್ಧ ಸೋಲುಂಡಿದ್ದರಿಂದ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಾಗಿದೆ.
ಭಾರತಕ್ಕೆ ಬ್ಯಾಡ್ಮಿಂಟನ್ ವಿಭಾಗದಲ್ಲಿಯೇ ಕನಿಷ್ಠ 2 ಬೆಳ್ಳಿ ಪದಕ ದೃಢಪಟ್ಟಂತಾಗಿದೆ. ಸುಕಾಂತ್ ಕದಮ್ ಗೆದ್ದರೆ ಒಂದು ಕಂಚು ಸೇರಿದಂತೆ ಮೂರು ಪದಕಗಳು ಲಭಿಸಿವೆ.