ತರಬೇತಿ ಅವಧಿಯಲ್ಲೇ ದರ್ಬಾರು ಮಾಡಲು ಹೋಗಿದ್ದ ಪೂಜಾ ಖಾಡ್ಕರ್ ಳನ್ನು ಕೇಂದ್ರ ಸರ್ಕಾರ ಐಎಎಸ್ ಸೇವೆಯಿಂದ ವಜಾಗೊಳಿಸಿದೆ.
ಪೂಜಾ ಖಾಡ್ಕರ್ ಹೆಸರನ್ನು ಯುಪಿಎಸ್ ಸಿಯಿಂದ ತೆಗೆದು ಹಾಕಿದ ಒಂದು ತಿಂಗಳ ನಂತರ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಐಎಎಸ್ ಸೇವೆಯಿಂದ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.
ಪೂಜಾ ಹಿಂದುಳಿದ ವರ್ಗಕ್ಕೆ ಸೇರಿದವಳು ಎಂದು ನಕಲಿ ದಾಖಲೆಗಳನ್ನು ನೀಡಿದ್ದಳು. ಅಲ್ಲದೇ ಅಂಗವಿಕಲೆ ಎಂದು ಸುಳ್ಳು ದಾಖಲೆ ನೀಡಿದ್ದಳು. ಹಲವಾರು ಬಾರಿ ಬೇರೆ ಬೇರೆ ಹೆಸರಿನಲ್ಲಿ ಐಎಎಸ್ ಪರೀಕ್ಷೆ ಬರೆದಿದ್ದಳು.
ಐಎಎಸ್ ಅಧಿಕಾರಿಯಾಗಿ ನೇಮಕಗೊಂಡು ತರಬೇತಿ ಅವಧಿಯಲ್ಲಿಯೇ ಹಿರಿಯ ಅಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿಯ ಪೀಠೋಪಕರಣಗಳನ್ನು ಬದಲಿಸಿದ್ದಳು. ಐಎಎಸ್ ಅಧಿಕಾರಿಗಳು ಬಳಸುವ ಕೆಂಪು ಗೂಟವನ್ನು ತನ್ನ ಖಾಸಗಿ ಕಾರಿಗೆ ಹಾಕಿಕೊಂಡಿದ್ದರು. ಅಲ್ಲದೇ ಸಾಕಷ್ಟು ಬಾರಿ ಸಂಚಾರಿ ನಿಯಮ ಕೂಡ ಉಲ್ಲಂಘಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೂಜಾ ಖಾಡ್ಕರ್ ಅವರನ್ನು ಐಎಎಸ್ ಸೇವೆಯಿಂದ ತತ್ ಕ್ಷಣದಿಂದಲೇ ವಜಾಗೊಳಿಸಿ ಆದೇಶ ಹೊರಡಿಸಿದೆ.