2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ ನಡೆಸಿರುವುದನ್ನು ಚರ್ಚೆ ನಡೆಸುವ ಸಂಬಂಧ ಪ್ರತಿಪಕ್ಷ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲವುಂಟಾಗಿದ್ದರಿಂದ ಬೆಳಗಾವಿ ವಿಧಾನಸಭೆಯ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ಮಾಜಿ ಶಾಸಕರಾದ ಆರ್.ನಾರಾಯಣ, ಜಯಣ್ಣ ಅವರ ಸಂತಾಪ ಸೂಚಕ ಬಳಿಕ ಪ್ರಶ್ನೋತ್ತರವನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕೈಗೆತ್ತಿಕೊಳ್ಳಲು ಮುಂದಾದರು.
ಕೂಡಲೇ ಎದ್ದು ನಿಂತ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಅವರು ಸದನ ನಡೆಯುವಾಗಲೇ ಪ್ರತಿಭಟನಾನಿರತ ಪಂಚಮಸಾಲಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ ಮಾಡಿ ದೌರ್ಜನ್ಯ ನಡೆಸಿದೆ, ಮುಖ್ಯಮಂತ್ರಿಗಳು ದುರಹಂಕಾರದ ವರ್ತನೆ ತೋರಿದ್ದಾರೆ ಮೊದಲು ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡಿ ಎಂದರು.
ಪ್ರಶ್ನೋತ್ತರ ಬಳಿಕ ಪಂಚಮಸಾಲಿ ಲಾಠಿ ಚಾರ್ಜ್ ವಿಷಯ ಕುರಿತು ಅರ್ಧಗಂಟೆಯ ಚರ್ಚೆಗೆ ಅವಕಾಶ ಮಾಡಿಕೊಡುವೆ ಎಂದು ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಪ್ರಶ್ನೋತ್ತರ ಅವಕಾಶಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಸದನ ನಡೆಯುವಾಗಲೇ ಪ್ರತಿಭಟನಾನಿರತ ಪಂಚಮಸಾಲಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ ಮಾಡಿ ದೌರ್ಜನ್ಯ ನಡೆಸಿದೆ, ಸ್ವಾಮೀಜಿಯನ್ನು ಬಂಧಿಸಲಾಗಿದೆ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಲು ಮೊದಲು ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಆಶೋಕ್ ಎರುಧ್ವನಿಯಲ್ಲಿ ಪ್ರಶ್ನಿಸಿದರು.
ಸದನ ನಡೆಯುವಾಗ ಲಾಠಿ ಪ್ರಹಾರ ನಡೆದಾಗ ಗೃಹ ಸಚಿವರು ಹೇಳಿಕೆ ನೀಡಬೇಕಲ್ಲ ಸ್ವಾಮೀಜಿ ಮೇಲೆ ದೌರ್ಜನ್ಯ ನಡೆದಿದೆ ಅದರ ಬಗ್ಗೆ ಉತ್ತರ ನೀಡಿ ಎಂದಾಗ ಸುನೀಲ್ ಕುಮಾರ್ ಸರ್ಕಾರದ ದುರಹಂಕಾರದ ವರ್ತನೆ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಆಡಳಿತ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಉಂಟಾದಾಗ ಸದನವನ್ನು ಕೆಲಕಾಲ ಸಭಾಧ್ಯಕ್ಷ ಖಾದರ್ ಮುಂದೂಡಿದರು.



