ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಕ್ಸ್ ನಲ್ಲಿ ಫಾಲೋವರ್ಸ್ ಸಂಖ್ಯೆ 100 ದಶಲಕ್ಷ ದಾಟಿದೆ. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವದ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಕ್ಸ್ ನಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ನಾಯಕನಾಗಿ ಮೋದಿ ಹೊರಹೊಮ್ಮಿದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಎರಡನೇ ಸ್ಥಾನ ಪಡೆದಿದ್ದಾರೆ.
ಪ್ರಧಾನಿ ಮೋದಿ ಅವರ ಫಾಲೋವರ್ಸ್ ಕಳೆದ 3 ವರ್ಷಗಳಲ್ಲಿ 30 ದಶಲಕ್ಷ ಸೇರ್ಪಡೆಯಾಗಿದೆ. ಯುಟ್ಯೂಬ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಕೂಡ ಮೋದಿ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದ್ದು, ಯೂಟ್ಯೂಬ್ ನಲ್ಲಿ 25 ದಶಲಕ್ಷ ಹಾಗೂ ಇನ್ ಸ್ಟಾಗ್ರಾಂನಲ್ಲಿ 91 ದಶಲಕ್ಷ ಫಾಲೋವರ್ಸ್ ಇದ್ದಾರೆ. ಮೋದಿ 2009ರಲ್ಲಿ ಎಕ್ಸ್ ನಲ್ಲಿ ಖಾತೆ ತೆರೆದಿದ್ದು, ಅಂದಿನಿಂದ ಮೋದಿ ಎಕ್ಸ್ ನಲ್ಲಿ ಸಕ್ರಿಯರಾಗಿದ್ದಾರೆ.
ಭಾರತದ ರಾಜಕಾರಣಿಗಳ ಪಟ್ಟಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮೂರನೇ ಸ್ಥಾನದಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇದ್ದಾರೆ. ಆದರೆ ಭಾರತದ ಯಾವೊಬ್ಬ ರಾಜಕಾರಣಿ ಕೂಡ ಮೋದಿ ಅರ್ಧದಷ್ಟು ಫಾಲೋವರ್ಸ್ ಹೊಂದಿಲ್ಲ ಎಂಬುದು ವಿಶೇಷ.
ರಾಹುಲ್ ಗಾಂಧಿ 26.4 ದಶಲಕ್ಷ ಫಾಲೋವರ್ಸ್ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ಅರವಿಂದ್ ಕೇಜ್ರಿವಾಲ್ (27.5 ದಶಲಕ್ಷ), ಅಖಿಲೇಶ್ ಯಾದವ್ (19.9 ದಶಲಕ್ಷ), ಮಮತಾ ಬ್ಯಾನರ್ಜಿ (7.4 ದಶಲಕ್ಷ), ಲಾಲು ಪ್ರಸಾದ್ ಯಾದವ್ (6.4 ದಶಲಕ್ಷ), ತೇಜಸ್ವಿ ಯಾದವ್ (5.2 ದಶಲಕ್ಷ) ಮತ್ತು ಶರದ್ ಪವಾರ್ (2.9 ದಶಲಕ್ಷ) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ. ಸೆಲೆಬ್ರೆಟಿಗಳ ಪೈಕಿ ಭಾರತ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (64.3 ದಶಲಕ್ಷ) ಎರಡನೇ ಸ್ಥಾನದಲ್ಲಿದ್ದಾರೆ.
A hundred million on @X!
Happy to be on this vibrant medium and cherish the discussion, debate, insights, people’s blessings, constructive criticism and more.
Looking forward to an equally engaging time in the future as well. pic.twitter.com/Gcl16wsSM5
— Narendra Modi (@narendramodi) July 14, 2024