ಡಬಲ್ ಒಲಿಂಪಿಕ್ಸ್ ಪದಕ ಗೆದ್ದು ದಾಖಲೆ ಬರೆದಿದ್ದ ಭಾರತದ ಪಿವಿ ಸಿಂಧು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಘಾತ ಅನುಭವಿಸಿ ಪ್ರೀಕ್ವಾರ್ಟರ್ ಫೈನಲ್ ನಿಂದ ಹೊರಬಿದ್ದಿದ್ದಾರೆ.
ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧು ಗುರುವಾರ ನಡೆದ ವನಿತೆಯರ ಸಿಂಗಲ್ಸ್ ಪ್ರೀಕ್ವಾರ್ಟರ್ ಫೈನಲ್ ನಲ್ಲಿ 19-21, 14-21 ನೇರ ಸೆಟ್ ಗಳಿಂದ ಚೀನಾದ ಹೀ ಬಿಂಗ್ ಜಿಯೊ ವಿರುದ್ಧ ಆಘಾತ ಅನುಭವಿಸಿದರು.
2020ರ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಇದೇ ಹೀ ಬಿಂಗ್ ಹಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದ ಪಿವಿ ಸಿಂಧು ಅದೇ ಸ್ಪರ್ಧಿ ವಿರುದ್ಧ ಆಘಾತ ಅನುಭವಿಸಿ ಪ್ರಶಸ್ತಿ ರೇಸ್ ನಿಂದ ಹೊರಬಿದ್ದರು.
1992ರಿಂದ ಇಲ್ಲಿಯವರೆಗೆ ಭಾರತ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮೂರು ಪದಕ ಗೆದ್ದ ಸಾಧನೆ ಮಾಡಿದೆ. ಇದರಲ್ಲಿ ಎರಡು ಬಾರಿ ಪಿವಿ ಸಿಂಧು ಪಡೆದಿದ್ದು. ಆದರೆ ಈ ಬಾರಿ ಪದಕ ಗೆಲ್ಲುವ ಹಾಟ್ ಫೇವರಿಟ್ ಆಗಿದ್ದ ಸಿಂಧು ಕ್ವಾರ್ಟರ್ ಫೈನಲ್ ಮುನ್ನವೇ ನಿರ್ಗಮಿಸಿ ನಿರಾಸೆ ಅನುಭವಿಸಿದ್ದಾರೆ.