Friday, November 22, 2024
Google search engine
Homeತಾಜಾ ಸುದ್ದಿರೈಲು ನಿಲ್ದಾಣಗಳಲ್ಲಿ 84,000 ಮಕ್ಕಳ ಜೀವ ರಕ್ಷಿಸಿದ ರೈಲ್ವೆ ಪೊಲೀಸರು!

ರೈಲು ನಿಲ್ದಾಣಗಳಲ್ಲಿ 84,000 ಮಕ್ಕಳ ಜೀವ ರಕ್ಷಿಸಿದ ರೈಲ್ವೆ ಪೊಲೀಸರು!

ದೇಶಾದ್ಯಂತ ಕಳೆದ 7 ವರ್ಷಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ 84,119 ಮಕ್ಕಳನ್ನು ರೈಲ್ವೆ ಸುರಕ್ಷಾ ಪೊಲೀಸರು (ಆರ್ ಪಿಎಫ್) ರಕ್ಷಿಸಿದ್ದಾರೆ.

ಬುಧವಾರ ರೈಲ್ವೆ ಸಚಿವಾಲಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ರಕ್ಷಿಸಲಾದ ಮಕ್ಕಳಲ್ಲಿ ಬಹುತೇಕ ರೈಲು ನಿಲ್ದಾಣ ಅಥವಾ ರೈಲುಗಳಲ್ಲಿ ಮನೆ ತೊರೆದವರು, ನಾಪತ್ತೆಯಾದವರು ಹಾಗೂ ಆಕಸ್ಮಿಕವಾಗಿ ಪೋಷಕರಿಂದ ದೂರ ಆದವರು. ಕೆಲವು ಪ್ರಕರಣಗಳಲ್ಲಿ ಅಪಹರಣಕ್ಕೆ ಒಳಗಾದ ಮಕ್ಕಳು ಸೇರಿದ್ದಾರೆ ಎಂದು ತಿಳಿಸಿದೆ.

ಪ್ರಸಕ್ತ 2024ನೇ ಸಾಲಿನ ಮೊದಲ 5 ತಿಂಗಳಲ್ಲಿ 4607 ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ 3430 ಮಕ್ಕಳು ಮನೆಯಿಂದ ಓಡಿ ಬಂದವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನನ್ನೆ ಫರಿಶ್ತೆ (ಮುಗ್ಧರ ದೇವರು) ಹೆಸರಿನಲ್ಲಿ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಮಕ್ಕಳನ್ನು ರಕ್ಷಿಸುವ ಪ್ರಮುಖ ಗುರಿಯೊಂದಿಗೆ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿ.

2018ರಲ್ಲಿ ನನ್ನೆ ಫರಿಶ್ತೆ ಕಾರ್ಯಾಚರಣೆ ಆರಂಭವಾಗಿದ್ದು, ಆರಂಭಿಕ ವರ್ಷದಲ್ಲಿ ಬಾಲಕ ಮತ್ತು ಬಾಲಕಿಯರು ಸೇರಿದಂತೆ 17,112 ಮಕ್ಕಳನ್ನು ರಕ್ಷಿಸಲಾಗಿತ್ತು. ಇದರಲ್ಲಿ 13,187 ಮಕ್ಕಳು ಮನೆ ತೊರೆದು ಬಂದವರಾಗಿದ್ದರೆ, 2015 ಮಕ್ಕಳು ನಾಪತ್ತೆ ಆದವರು. 1091 ಮಕ್ಕಳು ತಪ್ಪಿಸಿಕೊಂಡವರು, 400 ಮಕ್ಕಳು ನಿರ್ಗತಿಕರು, 87 ಮಕ್ಕಳು ಕಿಡ್ನಾಪ್ ಆದವರು, 78 ಮಕ್ಕಳು ಬುದ್ದಿಮಾಂದ್ಯರು, 131 ಮಕ್ಕಳು ಬೀದಿಬದಿ ವಾಸಿಗಳಾಗಿದ್ದಾರೆ.

2019ರಲ್ಲಿ 15,932 ಮಕ್ಕಳನ್ನು ರಕ್ಷಿಸಲಾಗಿದ್ದು, 12,708 ಮಕ್ಕಳು ಮನೆ ತೊರೆದವರು, 1,454 ನಾಪತ್ತೆಯಾದವರು, 1036 ಮಕ್ಕಳು ತಪ್ಪಿಸಿಕೊಂಡವರು, 350 ನಿರ್ಗತಿಕರು, 56 ಅಪಹರಣ, 123 ಮಾನಸಿಕ ಅಸ್ವಸ್ಥರು ಮತ್ತು 171 ಬೀದಿ ಮಕ್ಕಳು ಆಗಿದ್ದಾರೆ.

2020ರ ಕೊರೊನಾ ವೈರಸ್ ಅಬ್ಬರದ ನಡುವೆಯೂ 5011 ಮಕ್ಕಳನ್ನು ರಕ್ಷಿಸಲಾಗಿದೆ. 2021ರಲ್ಲಿ 11,907 ಮಕ್ಕಳನ್ನು ರಕ್ಷಿಸಲಾಗಿದ್ದು, 9601 ಮಕ್ಕಳು ಮನೆ ಬಿಟ್ಟು ಬಂದವರು, 961 ನಾಪತ್ತೆಯಾದವರು, 648 ತಪ್ಪಿಸಿಕೊಂಡವರು, 370 ನಿರ್ಗತಿಕರು, 78 ಕಿಡ್ನಾಪ್ ಆದವರು, 82 ಮಾನಸಿಕ ಅಸ್ವಸ್ಥರು ಮತ್ತು 123 ಬೀದಿ ಮಕ್ಕಳಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

2022ರಲ್ಲಿ 17,756 ಮಕ್ಕಳನ್ನು ರಕ್ಷಿಸಲಾಗಿದ್ದು, ಇದು ಕಳೆದ 7 ವರ್ಷಗಳಲ್ಲೇ ಗರಿಷ್ಠ ಪ್ರಕರಣವಾಗಿದೆ. 14,603 ಮಕ್ಕಳನ್ನು ಓಡಿಹೋದವರು, 1156 ನಾಪತ್ತೆಯಾದವರು, 1035 ಪೋಷಕರಿಂದ ತಪ್ಪಿಸಿಕೊಂಡವರು, 384 ನಿರ್ಗತಿಕರು, 161 ಅಪಹರಣಕ್ಕೊಳಗಾದವರು, 86 ಮಾನಸಿಕ ಅಸ್ವಸ್ಥರು ಮತ್ತು 212 ಬೀದಿ ಮಕ್ಕಳು ಎಂದು ಗುರುತಿಸಲಾಗಿದೆ.

2023ರಲ್ಲಿ 11,794 ಮಕ್ಕಳನ್ನು ರಕ್ಷಿಸಲಾಗಿದ್ದು, 8916 ಮಕ್ಕಳನ್ನು ಓಡಿಹೋದವರು, 986 ನಾಪತ್ತೆಯಾದವರು, 1055 ಪೋಷಕರಿಂದ ತಪ್ಪಿಸಿಕೊಂಡವರು, 236 ನಿರ್ಗತಿಕರು, 156 ಅಪಹರಣ, 112 ಮಾನಸಿಕ ಅಸ್ವಸ್ಥರು ಮತ್ತು 237 ಮಕ್ಕಳು ಬೀದಿ ಮಕ್ಕಳಾಗಿದ್ದಾರೆ ಎಂದು ಸಚಿವಾಲಯ ವಿವರಣೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments