ಭಾರತ ತಂಡದ ಕೋಚ್ ಸ್ಥಾನಕ್ಕಾಗಿ ಬಿಸಿಸಿಐ ನನ್ನನ್ನು ಸಂಪರ್ಕಿಸಿತ್ತು. ಆದರೆ ನಾನು ಈ ಆಹ್ವಾನವನ್ನು ತಿರಸ್ಕರಿಸಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಐಪಿಎಲ್ ಟಿ-20 ಟೂರ್ನಿಯ ವೇಳೆ ಬಿಸಿಸಿಐ ಕೋಚ್ ಸ್ಥಾನಕ್ಕೆ ಆಹ್ವಾನ ನೀಡಿತ್ತು. ಆದರೆ ನಾನು ಪ್ರಸ್ತುತ ನನ್ನ ಜೀವನ ಶೈಲಿಯಿಂದಾಗಿ ಭಾರತಕ್ಕೆ ಹೊಂದಿಕೊಳ್ಳುವುದು ಕಷ್ಟ. ಅದ್ದರಿಂದ ಕೋಚ್ ಆಹ್ವಾನ ತಿರಸ್ಕರಿಸಿದೆ ಎಂದರು.
ರಿಕಿ ಪಾಂಟಿಂಗ್ ಕಳೆದ 7 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ಟಿ-20 ತಂಡದ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಯಾವುದಾದರೂ ರಾಷ್ಟ್ರೀಯ ತಂಡದ ಕೋಚ್ ಆಗುವುದು ಎಲ್ಲರ ಹೆಬ್ಬೆಯಕೆ. ಆದರೆ ಪೂರ್ಣಾವಧಿ ಕೋಚ್ ಆದರೆ ಮನೆ ಕಡೆ ಗಮನ ಕೊಡಲು ಸಾಧ್ಯವಿಲ್ಲ. ಅಲ್ಲದೇ ಭಾರತ ತಂಡದ ಕೋಚ್ ಆದರೆ ಐಪಿಎಲ್ ತಂಡದ ಕೋಚ್ ಆಗಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.