ವಿಶ್ವದ ಸ್ಟಾರ್ ಆಟಗಾರರಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಇದೇ ಮೊದಲ ಬಾರಿ ಸ್ಪೇನ್ ನ ಸಂಪರ್ಕ ಆಟಗಾರ ರೋಡ್ರಿ 2024ನೇ ಸಾಲಿನ ಪ್ರತಿಷ್ಠಿತ ಬಾಲನ್ ಡಿ’ಓರ್ ಮೊದಲ ಬಾರಿ ಗೆದ್ದ ಸಾಧನೆ ಮಾಡಿದ್ದಾರೆ.
2024ರಲ್ಲಿ ಯುರೋ ಕಪ್ ಗೆದ್ದ ಮ್ಯಾಂಚೆಸ್ಟರ್ ಸಿಟಿ ಸತತ ನಾಲ್ಕನೇ ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೋಡ್ರಿ ಅವರನ್ನು ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ರೋಡ್ರಿಗೆ ಪ್ರಶಸ್ತಿ ಘೋಷಿಸುತ್ತಿದ್ದಂತೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸಮಾರಂಭವನ್ನು ಬಹಿಷ್ಕರಿಸಿತು.
ರಿಯಲ್ ಮ್ಯಾಡ್ರಿಡ್ ನ ಲಿಗಾ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವಿನ್ಸಿಯಸ್ ಜೂನಿಯರ್ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಆಗಿದ್ದರು. ಆದರೆ ಅಚ್ಚರಿ ಎಂಬಂತೆ ರೋಡ್ರಿಗೆ ಪ್ರಶಸ್ತಿ ಲಭಿಸಿರುವುದು ಫುಟ್ಬಾಲ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ವಿನ್ಸಿಯಸ್ ಜೂನಿಯರ್ ಗೆ ಪ್ರಶಸ್ತಿ ಕೊಡಬಾರದು ಎಂದು ಸ್ಪೇನ್ ನ ರಿಯಲ್ ಮ್ಯಾಡ್ರಿಡ್ ಆಟಗಾರರು ಆಗ್ರಹಿಸಿದ್ದು, ಡ್ಯಾನಿ ಕಾರ್ವಜಲ್ ಗೆ ನೀಡಬೇಕು ಎಂದು ಆಗ್ರಹಿಸಿದರು. ಇದರಿಂದ ಸಮಾರಂಭ ಆರಂಭಕ್ಕೂ ಮುನ್ನವೇ ಗೊಂದಲ, ಗದ್ಧಲ ಆರಂಭವಾಯಿತು.
ಅಲ್ಲದೇ ಕಳೆದ 15 ವರ್ಷಗಳಿಂದ ಸತತವಾಗಿ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಬಾಲನ್ ಡಿ ಓರ್ ಪ್ರಶಸ್ತಿ ಪೈಪೋಟಿಯ ಮೇಲೆ ಗೆಲ್ಲುತ್ತಾ ಬಂದಿದ್ದರು. ಆದರೆ ಈ ಇಬ್ಬರ ಹೆಸರು ಈ ಬಾರಿ ಕಾಣಿಸಿಕೊಳ್ಳದೇ ಇರುವುದು ಮತ್ತೊಂದು ಅಚ್ಚರಿಗೆ ಕಾರಣವಾಯಿತು.