ರಾಮಾಯಣವನ್ನು ರಾವೋವನ್ ಎಂಬ ಹೆಸರಿನಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಿದ 12 ವಿದ್ಯಾರ್ಥಿಗಳಲ್ಲಿ ತಲಾ 1.2 ಲಕ್ಷ ರೂ. ದಂಡವನ್ನು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಸ್ (ಐಐಟಿ) ಬಾಂಬೆ ವಿಧಿಸಿದೆ.
ರಾಮಾಯಣ ಕಥೆಯನ್ನು ಆಧರಿಸಿ ಕಳಪೆ ಪ್ರದರ್ಶನ ನೀಡಲಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಮೇ 8ರಂದು ನಡೆದ ರಾಮಾಯಣ ನಾಟಕದಲ್ಲಿ ಪಾತ್ರಗಳನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದ್ದು, ಇದರಿಂದ ವ್ಯಂಗ್ಯ ಮಾಡಲಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು. ಶಿಸ್ತು ಸಮಿತಿ ತನಿಖೆ ನಡೆಸಿ ಜೂನ್ 4ರಂದು ವಿಚಾರಣೆ ನಡೆಸಿತ್ತು.
12 ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿಗಳಿಗೆ 1.2 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ವಿದ್ಯಾರ್ಥಿಗಳ ಒಂದು ಸೆಮಿಸ್ಟರ್ ನ ಟ್ಯೂಷನ್ ಶುಲ್ಕವಾಗಿದೆ. 8 ವಿದ್ಯಾರ್ಥಿಗಳಿಗೆ ತಲಾ 40 ಸಾವಿರ ದಂಡ ವಿಧಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆಯಿಂದ ವಿನಾಯಿತಿ ದೊರೆತಂತೆ ಆಗಿದೆ. ಒಂದು ವೇಳೆ ಅಮಾನತುಗೊಂಡಿದ್ದರೆ ಹಾಸ್ಟೇಲ್ ಸೌಲಭ್ಯದಿಂದ ವಂಚಿತರಾಗುತ್ತಿದ್ದರು.