ವಲಸೆ ಬಂದ ಸುಮಾರು 10,000 ವಲಸಿಗರನ್ನು ಉಕ್ರೇನ್ ಮೇಲೆ ಯುದ್ಧ ಮಾಡಲು ರಷ್ಯಾ ಕಳುಹಿಸಲಿದೆ. ಈ ಮೂಲಕ ವರ್ಷದಿಂದ ನಡೆಯುತ್ತಿರುವ ಯುದ್ಧಕ್ಕೆ ಹೊಸ ರೂಪ ನೀಡಲಿದ್ದಾರೆ.
ಮಾಸ್ಕೊದಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಸೆಂಟ್ರಲ್ ಏಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಬಂದು ರಷ್ಯಾದ ನಾಗರಿಕತ್ವ ಪಡೆದ ಸುಮಾರು 10 ಸಾವಿರ ನಾಗರಿಕರನ್ನು ಯುದ್ಧ ಮಾಡಲು ಉಕ್ರೇನ್ ಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ 30,000ಕ್ಕೂ ಅಧಿಕ ಜನರು ತಮ್ಮ ನಾಗರಿಕತ್ವವನ್ನು ನೊಂದಾಯಿಸಿಕೊಂಡಿದ್ದಾರೆ. ಇನ್ನು ಕೆಲವರು ಹೆಸರು ನೊಂದಾಯಿಸಿಕೊಳ್ಳದೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ನೊಂದಾಯಿಸಿಕೊಂಡರವಲ್ಲಿ ಆಯ್ಕೆಯಾದವರನ್ನು ಮಾತ್ರ ಉಕ್ರೇನ್ ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಉಕ್ರೇನ್ ನಲ್ಲಿ ಬಿಡುಬಿಟ್ಟಿರುವ ರಷ್ಯಾದ ಶಿಬಿರಗಳಿಗೆ ಈಗಾಗಲೇ 10,000 ಮಂದಿಯನ್ನು ಕಳುಹಿಸಿಕೊಡಲಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡಿ ಸೇನಾ ಕಾರ್ಯಾಚರಣೆಗಳಿಗೆ ಬಳಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.