ಜೂನ್ 11ರಿಂದ 19ರ ನಡುವಿನ 9 ದಿನದಲ್ಲಿ 192 ಮನೆ ಇಲ್ಲದ ನಿರ್ವಸತಿಗಾರರು ರಾಜಧಾನಿ ದೆಹಲಿಯಲ್ಲಿ ಅಸುನೀಗಿದ್ದಾರೆ ಎಂಬ ಆಘಾತಕಾರಿ ವರದಿ ಬಿಡುಗಡೆ ಆಗಿದೆ.
ಹೋಲಿಸ್ಟಿಕ್ ಡೆವಲಪ್ ಮೆಂಟ್ ಎಂಬ ಎನ್ ಜಿಒ ಈ ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ 6 ವರ್ಷಗಳಲ್ಲಿ ಈ ಅವಧಿಯಲ್ಲಿ ದೆಹಲಿಯಲ್ಲಿ ಅತೀ ಹೆಚ್ಚು ನಿರ್ವಸತಿಗರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಕಳೆದ 72 ಗಂಟೆಯಲ್ಲಿ ದೆಹಲಿಯಲ್ಲಿ ಬಿಸಿಗಾಳಿಯಿಂ 5 ಮಂದಿ ಅಸುನೀಗಿದ್ದಾರೆ. ನೋಯ್ಡಾದಲ್ಲಿ 14 ಮಂದಿ ಅಸುನೀಗಿದ್ದಾರೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಇರುವುದರಿಂದ ಬಿಸಿಗಾಳಿ ಪ್ರಮಾಣ ಹೆಚ್ಚಾಗಿದ್ದು, ಈ ಬಾರಿ ಹೆಚ್ಚು ಜನರನ್ನು ಬಲಿ ಪಡೆದಿದೆ.
ಜೂನ್ 11ರಿಂದ 19ರ ನಡುವಿನ ಅವಧಿಯಲ್ಲಿ ದೆಹಲಿಯಲ್ಲಿ ಅತೀ ಹೆಚ್ಚು ಜನರು ಬಿಸಿಗಾಳಿಗೆ ಬಲಿಯಾಗುತ್ತಿದ್ದಾರೆ. 2019ರಲ್ಲಿ 143, 2020ರಲ್ಲಿ 124, 2021ರಲ್ಲಿ 58, 2022ರಲ್ಲಿ 150, 2023ರಲ್ಲಿ 75 ಹಾಗೂ 2023ರಲ್ಲಿ 192 ಮಂದಿ ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶ ತಿಳಿಸಿವೆ.