Tuesday, 24 November 2026 — Kannadavahini
BREAKING NEWS
ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ ರಾಜ್ಯ ಭೂ ಸುಧಾರಣಾ ಮಸೂದೆ ಜಾರಿ ವೇಳೆ ನನಗೆ 2-3 ಬಾರಿ ವಿಷ ನೀಡಿದ್ದರು: ವೀರಪ್ಪ ಮೊಯ್ಲಿ ಬಾಂಬ್ ದೇಶ ಯುಪಿ ಚುನಾವಣೆ: 80 ಸ್ಥಾನಕ್ಕಿಳಿದ ಕೈ ಬೇಡಿಕೆ ಪಟ್ಟಿ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಬೆಂಗಳೂರು ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ ರಾಜ್ಯ ಭೂ ಸುಧಾರಣಾ ಮಸೂದೆ ಜಾರಿ ವೇಳೆ ನನಗೆ 2-3 ಬಾರಿ ವಿಷ ನೀಡಿದ್ದರು: ವೀರಪ್ಪ ಮೊಯ್ಲಿ ಬಾಂಬ್ ದೇಶ ಯುಪಿ ಚುನಾವಣೆ: 80 ಸ್ಥಾನಕ್ಕಿಳಿದ ಕೈ ಬೇಡಿಕೆ ಪಟ್ಟಿ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಬೆಂಗಳೂರು ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ
ವಿಶೇಷ

ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ?

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
6 ನಿಮಿಷ ಓದು 21 ವೀಕ್ಷಣೆಗಳು
gold price

ಕಳೆದ ಒಂದು ವರ್ಷದಿಂದ ಸತತ ಏರಿಕೆ ಕಾಣುತ್ತಲೇ ಸಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಕುಸಿತ ಕಾಣಲು ಆರಂಭಿಸಿದೆ. ಅದರಲ್ಲೂ ಮದುವೆ ಸೀಸನ್‌ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಇಳಿಕೆ ಆಗಿದ್ದರಿಂದ ಜನರು ಸಂತೋಷಗೊಂಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಸಬೇಡಿ, ಅಡುಗೆ ಎಣ್ಣೆ ಕಡಿಮೆ ಬಳಸಿ, ಮಿತವ್ಯಯ ಮಾಡಿ ದೇಶಪ್ರೇಮ ತೋರಿಸಿ ಎಂದು ಕರೆ ನೀಡಿದ್ದರಿಂದ ಈ ಬೆಲೆ ಇಳಿದಿದೆ ಎಂಬ ವಾದ ಕೇಳಿಬರುತ್ತಿದೆ. ಸ್ವತಃ ಪ್ರಧಾನಿಗಳೇ ನಾನು ನೀಡಿದ ಸಲಹೆ ಪಾಲಿಸಿದ್ದರಿಂದ ಚಿನ್ನದ ಬೆಲೆ ಇಳಿದಿದೆ. ಇದೇ ರೀತಿ ಇನ್ನೂ ಒಂದು ವರ್ಷ ಪಾಲಿಸಿ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಇದಕ್ಕೆ ಸಾಥ್‌ ಎಂಬಂತೆ ಕೆಲವು ಅಂಧಭಕ್ತರು ಹಾಗೂ ವ್ಯಾಪಾರಿಗಳು ಕೂಡ ಮೋದಿಯಿಂದಲೇ ಚಿನ್ನದ ಬೆಲೆ ಇಳಿದಿದೆ ಅವರಿಗೆ ಧನ್ಯವಾದಗಳು ಎಂದೆಲ್ಲಾ ಹಾಡಿ ಹೊಗಳಲು ಆರಂಭಿಸಿದ್ದಾರೆ.

2026 ಮೇ 9ರಂದು ಸಿಕಂದರಾಬಾದ್‌ ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಚಿನ್ನ ಖರೀದಿಸಬೇಡಿ ಎಂದು ಜನರಿಗೆ ಕರೆ ನೀಡಿದ್ದರು. ತಾವು ನೀಡಿದ ಹೇಳಿಕೆಯನ್ನು ನವೆಂಬರ್‌ 22ರಂದು ಉತ್ತರ ಪ್ರದೇಶದ ಗೋಮತಿ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೋದಿ, ತಾವು ಸಲಹೆ ನೀಡಿದ್ದನ್ನು ಜನರು ಪಾಲಿಸಿ ಚಿನ್ನ ಖರೀದಿಸದೇ ಇದ್ದಿದ್ದರಿಂದ ಚಿನ್ನ ಬೆಲೆ ಇಳಿಕೆ ಆಗಿದೆ. ಇನ್ನು1 ವರ್ಷ ಇದೇ ರೀತಿ ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದೂ ಅಲ್ಲದೇ ತಮ್ಮನ್ನು ಬೆಂಬಲಿಸಿದ ಜನರಿಗೆ ಧನ್ಯವಾದ ಹೇಳಿದರು. ಮೋದಿ ಮೇ 9ರಂದು ನೀಡಿದ್ದ ಕರೆ ವೇಳೆ ಚಿನ್ನದ ದರ ಪ್ರತಿ ಗ್ರಾಂ ಚಿನ್ನದ ಬೆಲೆ 15,220 ರೂ. ಇತ್ತು. ಆದರೆ ನ.22ರಂದು ಹೇಳಿಕೆ ನೀಡುವಾಗ ಈ ಬೆಲೆ 12,523 ಆಗಿತ್ತು.

ಮೋದಿ ಮಾತು ಬೆಂಬಲಿಸಿದ ಚೇಂಬರ್ ಆಫ್ ಟ್ರೇಡ್ ಆ್ಯಂಜಡ್ ಇಂಡಸ್ಟ್ರಿ, ಮೋದಿ ಸಲಹೆ ನೀಡಿದ ಸಮಯದಲ್ಲಿ ಪ್ರತಿ ಕೆಜಿ ಚಿನ್ನದ ಬೆಲೆ 1.90 ಕೋಟಿ ರೂಪಾಯಿ ಇತ್ತು. ಇದೀಗ 1.25 ಕೋಟಿಗೆ ಇಳಿಕೆಯಾಗಿದೆ. ಇದರಿಂದ ಪ್ರತಿ ಕೆಜಿಯಲ್ಲಿ ವ್ಯಾಪಾರಿಗಳು 65 ಲಕ್ಷ ರೂಪಾಯಿ ಉಳಿತಾಯವಾಗಿದೆ ಎಂದು ಮೋದಿಗೆ ಧನ್ಯವಾದ ಪತ್ರ ಬರೆದಿದ್ದಾರೆ. ಅಲ್ಲದೇ ಹಲವಾರು ಮಹಿಳೆಯರು ಮೋದಿ ಸಲಹೆಯಿಂದ ಚಿನ್ನ ಖರೀದಿಸಿರಲಿಲ್ಲ. ಈಗ ಬೆಲೆ ಕಡಿಮೆ ಆಗಿದೆ. ಹಾಗಾಗಿ ನಾವು ಈಗ ಚಿನ್ನ ಖರೀದಿಸುತ್ತಿದ್ದೇವೆ ಎಂದು ಹೇಳಿಕೆಗಳನ್ನು ನೀಡಿದ್ದರು.

ಹಾಗಾದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದನ್ನು ಜನರು ಪಾಲಿಸಿದ್ದರಿಂದಲೇ ಚಿನ್ನದ ಬೆಲೆ ಇಳಿಯಿತೇ ಎಂದು ತಿಳಿಯಬೇಕಾದರೆ ಅದಕ್ಕೂ ಮುನ್ನ ನಾವು ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಚಿನ್ನದ ದರ ಹೇಗೆ ನಿಗದಿಯಾಗುತ್ತದೆ? ಎಲ್ಲಿ ನಿಗದಿಯಾಗುತ್ತದೆ? ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆಗೆ ಕಾರಣಳೇನು ಎಂಬುದನ್ನು ತಿಳಿಯೋಣ…

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ನಿಗದಿಯಾಗುವುದು ಲಂಡನ್‌ ಹಾಗೂ ನ್ಯೂಯಾರ್ಕ್ ಬುಲಿಯನ್‌ ಮಾರುಕಟ್ಟೆ ಅಸೋಸಿಯೇಷನ್‌ ನಲ್ಲಿ. ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಹಾಗೂ ಜಾಗತಿಕ ಮಟ್ಟದಲ್ಲಿನ ಪ್ರಮುಖ ಬೆಳವಣಿಗೆಗಳ ಆಧಾರದ ಮೇಲೆ ದರ ನಿಗದಿಯಾಗುತ್ತದೆ. ಇಲ್ಲಿ ದಿನಕ್ಕೆ ಎರಡು ಬಾರಿ ಅಮೆರಿಕನ್‌ ಡಾಲರ್‌ ಮೂಲಕ ದರ ನಿಗದಿಯಾಗುತ್ತದೆ. ಇಲ್ಲಿ ನಿಗದಿಯಾದ ದರದಲ್ಲಿ ಚಿನ್ನವನ್ನು ಖರೀದಿಸುವ ಭಾರತ ಅವುಗಳ ದರದಲ್ಲಿನ ಸರಾಸರಿ ಮೊತ್ತದ ಆಧಾರದ ಮೇಲೆ ದೈನಂದಿನ ದರ ಪ್ರಕಟಿಸುತ್ತದೆ.

ಭಾರತ ತನ್ನ ಮಾರುಕಟ್ಟೆಯ ಶೇ.ರಷ್ಟು ಕೂಡ ಚಿನ್ನ ಉತ್ಪಾದನೆ ಮಾಡುವುದಿಲ್ಲ. ಬದಲಾಗಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಚಿನ್ನದ ಬೇಡಿಕೆ ಅತೀ ಹೆಚ್ಚು ಇರುವ ದೇಶಗಳ ಪ್ರಮುಖ ಸಾಲಿನಲ್ಲಿ ಭಾರತ ಇದೆ. ಹಾಗಾಗಿ ಭಾರತ ಅತೀ ದೊಡ್ಡ ಚಿನ್ನದ ಆಮದು ಮಾಡಿಕೊಳ್ಳುವ ದೇಶವಾಗಿದೆ. ಚಿನ್ನವನ್ನು ಭಾರತ ಅಮೆರಿಕನ್‌ ಡಾಲರ್‌ ಮೂಲಕವೇ ಖರೀದಿಸಬೇಕಾಗಿರುವುದರಿಂದ ಭಾರತದ ರೂಪಾಯಿ ಮೌಲ್ಯ ಕುಸಿದಾದ ಚಿನ್ನದ ಆಮದು ಮೊತ್ತವೂ ಹೆಚ್ಚಾಗಿ ಭಾರತೀಯರ ಮೇಲೆ ಹೆಚ್ಚಿನ ಹೊರೆಬೀಳುತ್ತದೆ. ಅಲ್ಲದೇ ಶೇ.3ರಷ್ಟು ಸುಂಕದ ಹೊರೆಯೂ ಖರೀದಿ ಮಾಡುವವರ ಮೇಲೆ ಹೋಗುತ್ತದೆ.

 ಚಿನ್ನದ ಬೆಲೆ ಇಳಿಯಲು ನಿಜವಾದ ಕಾರಣವೇನು?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿಗದಿಯಾಗುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಖರೀದಿ ಪ್ರಮಾಣ ಸೇರಿದಂತೆ ಹಲವು ವಿಷಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಇತ್ತೀಚೆಗೆ ಅಮೆರಿಕ- ಇರಾನ್‌ ಮತ್ತು ಇಸ್ರೇಲ್‌ ನಡುವಣ ಯುದ್ಧ ಹಾಗೂ ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಿಂದ ಚಿನ್ನದ ಬೆಲೆ ಹೂಡಿಕೆ ಪ್ರಮಾಣ ಹೆಚ್ಚಾಗಿತ್ತು. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಹರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಾಟಕ್ಕೆ ನಿರ್ಬಂಧ ಹಾಗೂ ಅಮೆರಿಕ ಸುಂಕ ಹೇರಿಕೆ ಪ್ರಸ್ತಾಪ ಹಾಗೂ ಅಮೆರಿಕದ ಬ್ಯಾಂಕ್‌ ಗಳ ಬಡ್ಡಿ ದರ ಹೆಚ್ಚಳದಿಂದ ಉದ್ಯಮಿಗಳು ಹಾಗೂ ವ್ಯಾಪಾರಿಗಳು ಹಾಗೂ ಶ್ರೀಮಂತರು ಹೂಡಿಕೆ ದೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿಗೆ ಮುಗಿಬಿದ್ದಿದ್ದರಿಂದ ಚಿನ್ನ ಹಾಗೂ ಬೆಳ್ಳಿ ದರ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿತ್ತು.

ಆದರೆ ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಕ್ಷ ಹೀನಾಯ ಸೋಲುಂಡರು. ಈ ಸೋಲು ಅಮೆರಿಕ ಸಾರಿದ ಯುದ್ಧ ಹಾಗೂ ವಲಸೆ ನೀತಿಗಳು ಕಾರಣ ಎಂಬುದು ಸ್ಪಷ್ಟವಾಗಿತ್ತು. ಈ ಸೋಲಿನ ಬೆನ್ನಲ್ಲೇ ಟ್ರಂಪ್‌ ಇರಾನ್‌ ಜೊತೆಗಿನ ಯುದ್ಧಕ್ಕೆ ನಿಯಂತ್ರಣ ಹೇರಿದರೆ, ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ವಿರಾಮ ಹಾಡಲು ಮುಂದಾದರು. ಅಲ್ಲದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆ ಮಾತುಕತೆ ನಡೆಸಿ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವತ್ತ ಚರ್ಚೆ ನಡೆಸಿದರು. ಈ ಸಕರಾತ್ಮಕ ಬೆಳೆವಣಿಗೆ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು. ಚಿನ್ನ ಹಾಗೂ ಆಮದು ಮೇಲೆ ಹೂಡಿಕೆ ಮಾಡಿದ್ದ ಜನರು ಲಾಭ ಗಳಿಸುವ ಆಸೆಯಿಂದ ಚಿನ್ನ ಮಾರಲು ಮುಗಿಬಿದ್ದರು. ಇದರಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳಲ್ಲಿ ಭಾರೀ ಇಳಿಕೆ ಕಂಡುಬಂದಿತು.

ಡೊನಾಲ್ಡ್‌ ಟ್ರಂಪ್‌ ಫೆಡರಲ್‌ ಬ್ಯಾಂಕ್‌ ಗಳು ಬಡ್ಡಿದರ ಹೆಚ್ಚು ಹೇರುತ್ತಿವೆ ಎಂದು ಆರೋಪಿಸಿದ್ದು, ಬಡ್ಡಿ ದರ ಕಡಿಮೆ ಮಾಡುವುದಕ್ಕೆ ಸೂಚಿಸಿದ್ದಾರೆ. ಇದು ಕೂಡ ಚಿನ್ನದ ಬೆಲೆ ಇಳಿಕೆಗೆ ಮತ್ತೊಂದು ಕಾರಣವಾಗಿದೆ. ಆದರೆ ಫೆಡರಲ್‌ ಬ್ಯಾಂಕ್‌ ಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಮುಂದಿನ ದಿನಗಳಲ್ಲಿ ಬಡ್ಡಿ ದರ ಇಳಿಸಿದರೆ ಚಿನ್ನದ ದರ ಮತ್ತಷ್ಟು ಕಡಿಮೆ ಆಗಲಿದೆ. ಒಂದು ವೇಳೆ ಹೆಚ್ಚಿಸಿದರೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ ಅಮೆರಿಕದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿರುವುದು. ರೂಪಾಯಿ ಮೌಲ್ಯ ಕುಸಿತದಿಂದ ದೇಶದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಲು ಕಾರಣ. ಅಲ್ಲದೇ ಭಾರತ ಇಂಧನ ಹಾಗೂ ಚಿನ್ನ, ಬೆಳ್ಳಿ ಆಮದಿಗೆ ಹೆಚ್ಚಿನ ಮೊತ್ತ ಇಡಬೇಕಿರುವುದರಿಂದ ಭಾರತ ಹೆಚ್ಚಿನ ದರ ನೀಡಿ ಖರೀದಿಸುವಂತಾಗಿದೆ. ಪ್ರಸ್ತುತ ಅಮೆರಿಕದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ 95ರ ಸರಾಸರಿಯಲ್ಲಿದೆ. ಅಂದರೆ ಒಂದು ಡಾಲರ್‌ ಗೆ ಭಾರತ 95 ರೂ. ನೀಡಬೇಕಾಗಿದೆ. ಅಲ್ಲದೇ ಸುಂಕ ಹಾಗೂ ಸಾಗಾಟ ಖರ್ಚು ಕೂಡ ಭಾರತದ ಪಾಲಿಗೆ ದುಬಾರಿಯಾಗಿದೆ.

ಈಗ ಪ್ರಮುಖ ಪ್ರಶ್ನೆ ಎಂದರೆ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದನ್ನು ಜನರು ಪಾಲಿಸಿದ್ದರಿಂದ ಚಿನ್ನದ ಬೆಲೆ ಕಡಿಮೆ ಆಗಿದೆಯೇ ಎಂಬುದು. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮೋದಿ ಹೇಳಿದ್ದನ್ನು ಜನರು ಕೇಳಿದ್ದಕ್ಕೆ ಚಿನ್ನ ಬೆಲೆ ಇಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೇ ಭಾರತೀಯ ಮಾರುಕಟ್ಟೆಯ ಮೇಲೆ ಶೇ.1ರಷ್ಟು ಇದರ ಪರಿಣಾಮ ಬಿದ್ದಿರಬಹುದು.

ಈಗ ಭಾರತದಲ್ಲಿ ಮದುವೆ ಸೀಸನ್‌ ಆರಂಭವಾಗಿದೆ. ನವೆಂಬರ್‌ 21ರಿಂದ ಡಿಸೆಂಬರ್‌ 15ರವರೆಗೆ ಭಾರತದಲ್ಲಿ ಸರಿ ಸುಮಾರು 52 ಲಕ್ಷ ಮದುವೆಗಳು ನಡೆಯಲಿವೆ. ಈ ಒಂದು ತಿಂಗಳ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 7.5 ಲಕ್ಷ ಕೋಟಿ ರೂ. ವಹಿವಾಟು ನಡೆಯುವ ಭರವಸೆ ಇದೆ. ಇಷ್ಟು ದೊಡ್ಡ ಮೊತ್ತದಲ್ಲಿ ಬಹುತೇಕ ಚಿನ್ನ, ಬೆಳ್ಳಿ, ಬಟ್ಟೆ ಮುಂತಾದವುಗಳಿಗೆ ಹೆಚ್ಚು ಖರ್ಚಾಗಲಿದೆ. ಈ ವೇಳೆ ಚಿನ್ನದ ದರ ಕುಸಿತ ಭಾರತೀಯರಲ್ಲಿ ಖುಷಿ ಕೊಟ್ಟಿದೆ.

ಆದರೆ ಒಟ್ಟಾರೆ ಹೇಳಬೇಕು ಅಂದರೆ ಪ್ರಧಾನಿ ಮೋದಿ ಮನವಿ ಮಾಡಿದ ಮಾತ್ರಕ್ಕೆ ಚಿನ್ನದ ಬೆಲೆ ಇಳಿಕೆ ಆಗಿಲ್ಲ ಎಂಬುದು. ಭಾರತದಲ್ಲಿ ಚಿನ್ನದ ಖರೀದಿ ಪ್ರಮಾಣ ಕುಸಿದಿರಬಹುದು. ಇದರಿಂದ ಆಮದು ಪ್ರಮಾಣದಲ್ಲಿ ಕುಸಿತ ಕಂಡು ಕೇಂದ್ರ ಸರ್ಕಾರಕ್ಕೆ ವೆಚ್ಚ ಕಡಿಮೆ ಆಗಿರಬಹುದು. ಆದರೆ ಚಿನ್ನದ ಬೆಲೆ ಕಡಿಮೆ ಆಗಲು ಅಲ್ಲ. ಈಗಾಗಲೇ ಹೇಳಿರುವಂತೆ ಜಾಗತಿಕ ಮಟ್ಟದಲ್ಲಿ ಇದ್ದ ಯುದ್ಧದ ಆತಂಕ, ಫೆಡರಲ್‌ ಬ್ಯಾಂಕ್‌ ಗಳ ಬಡ್ಡಿದರ ಹೆಚ್ಚಳ, ಅಮೆರಿಕದ ವಲಸೆ ನೀತಿ, ಉದ್ಯೋಗ ಅಭದ್ರತೆ, ರೂಪಾಯಿ ಮೌಲ್ಯ ಕುಸಿತ, ಆಮದು ಸುಂಕ ಸೇರಿದಂತೆ ಹಲವು ವಿಷಯಗಳು ಪ್ರಮುಖ ಪಾತ್ರ ವಹಿಸಿವೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8438 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment