10,000 ಕಾಂಡೊಮ್ ಗಳನ್ನು ಉಚಿತವಾಗಿ ನೀಡಿದರೂ ಸಾಕಾಗದೇ 2026ರ ಮಿಲಾನ್- ಕ್ರೊವೇಷಿಯಾ ಚಳಿಗಾಲದ ಒಲಿಂಪಿಕ್ಸ್ ಸಂಘಟಕರು ವಿಚಿತ್ರ ಸಮಸ್ಯೆ ಎದುರಿಸುವಂತಾಗಿದೆ.
ಚಳಿಗಾಲದ ಒಲಿಂಪಿಕ್ಸ್ ಆರಂಭವಾದ ಕೆಲವೇ ದಿನಗಳಲ್ಲಿ ಅಥ್ಲೀಟ್ ಗಳಿಗೆ ನೀಡಲೂ ತರಿಸಲಾಗಿದ್ದ 10,000 ಕಾಂಡೊಮ್ ಗಳು ಖಾಲಿ ಆಗಿವೆ. ಇಷ್ಟು ಬೇಗ ಕಾಂಡೊಮ್ ಖಾಲಿ ಆಗುತ್ತದೆ ಎಂದು ನಿರೀಕ್ಷಿಸದ ಸಂಘಟಕರು ಈಗ ಕಾಂಡೊಮ್ ಪೂರೈಸಲು ಪರದಾಡುವಂತಾಗಿದೆ.
ಕಾಂಡೊಮ್ ಗಳ ಕೊರತೆಯಿಂದ ಅಥ್ಲೀಟ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅಥ್ಲೀಟ್ ಗಳ ಬೇಡಿಕೆಗಳನ್ನು ಸಮಪರ್ಕವಾಗಿ ಈಡೇರಿಸಲು ಸಂಘಟಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ರೀಡಾಕೂಟ ಆರಂಭವಾದ 3 ದಿನಕ್ಕೆ ಕಾಂಡೊಮ್ ಗಳು ಖಾಲಿ ಆಗಿವೆ. ನಾವು ಆದಷ್ಟು ಬೇಗನೇ ಕಾಂಡೊಮ್ ಪೂರೈಸುವುದಾಗಿ ಸಂಘಟಕರು ಹೇಳುತ್ತಿದ್ದಾರೆ. ಆದರೆ ಯಾವಾಗ ಎಂದು ನಿರ್ದಿಷ್ಟವಾಗಿ ಉತ್ತರ ನೀಡುತ್ತಿಲ್ಲ ಎಂದು ಇಟಲಿಯ ಅಥ್ಲೀಟ್ ಗಳು ಆರೋಪಿಸಿದ್ದಾರೆ.
ಕಾಂಡೊಮ್ ಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇರುತ್ತದೆ ಎಂದು ನಿರೀಕ್ಷಿಸದ ಸಂಘಟಕರು ಇದೀಗ ಕಾಂಡೊಮ್ ಪೂರೈಸಲು ಪರದಾಡುವಂತಾಗಿದೆ.
ಪ್ಯಾರಿಸ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ದಿನಕ್ಕೆ ಎರಡರಂತೆ 3 ಲಕ್ಷ ಕಾಂಡೊಮ್ ಗಳನ್ನು ವಿತರಿಸಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ತುಂಬಾ ಕಡಿಮೆ ಬೇಡಿಕೆ ಇದೆ. ಕೇವಲ 10 ಸಾವಿರ ಕಾಂಡೊಮ್ ತರಿಸಿ ಸಂಘಟಕರು ಮುಜುಗರಕ್ಕೆ ಒಳಗಾಗಿದ್ದಾರೆ.


