ಮಧ್ಯಮ ವೇಗಿ ಮಾರ್ಕೊ ಜಾನ್ಸನ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 42 ರನ್ ಗಳ ಕಳಪೆ ಮೊತ್ತಕ್ಕೆ ಔಟಾಗಿ ದಾಖಲೆ ಬರೆದಿದೆ.
ಡರ್ಬಾನ್ ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಗುರುವಾರ ದಕ್ಷಿಣ ಆಫ್ರಿಕಾ 191 ರನ್ ಗೆ ಆಲೌಟ್ ಮಾಡಿದ ನಂತರ ಮೊದಲ ಇನಿಂಗ್ಸ್ ಆಡಲಿಳಿದ ಶ್ರೀಲಂಕಾ ತಂಡ ಕೇವಲ 83 ಎಸೆತಗಳಲ್ಲಿ 43 ರನ್ ಗೆ ಪತನಗೊಂಡಿದೆ.
ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ದಾಖಲಿಸಿದ ಅತ್ಯಂತ ಕಳಪೆ ಮೊತ್ತವಾಗಿದೆ. ಮತ್ತು ಅತ್ಯಂತ ಕಡಿಮೆ ಸಮಯ ಅಥವಾ ಎಸೆತಗಳಲ್ಲಿ ಆಲೌಟ್ ಆದ ಕುಖ್ಯಾತಿಗೆ ಪಾತ್ರವಾಯಿತು.
ಶ್ರೀಲಂಕಾ ತಂಡ 1974ರಲ್ಲಿ ಪಾಕಿಸ್ತಾನದ ಕ್ಯಾಂಡಿಯಲ್ಲಿ 71 ರನ್ ಗೆ ಆಲೌಟಾಗಿದ್ದು ಇದುವರೆಗಿನ ಕಳಪೆ ಸಾಧನೆಯಾಗಿತ್ತು. ಒಟ್ಟಾರೆಯಾಗಿ ಶ್ರೀಲಂಕಾದ 2ನೇ ಅಲ್ಪ ಮೊತ್ತವಾಗಿದೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗೆ ಆಲೌಟಾಗಿತ್ತು.
ಜಾನ್ಸನ್ 6.5 ಓವರ್ ಗಳಲ್ಲಿ 13 ರನ್ ಗೆ 7 ವಿಕೆಟ್ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು. ಶ್ರೀಲಂಕಾ ಪರ ಕಮಿಂಡು ಮೆಂಡಿಸ್ (13), ಲಹಿರು ಕುಮಾರ (10) ಮಾತ್ರ ಎರಡಂಕಿ ಮಾತ್ರ ದಾಟಿದರು.