ಎಡಗೈ ಸ್ಫೋಟಕ ಬ್ಯಾಟ್ಸ್ ಮನ್ ಶಿವಂ ದುಬೆ ಸತತ 7 ಸಿಕ್ಸರ್ ಸೇರಿದಂತೆ 36 ಎಸೆತಗಳಲ್ಲಿ 71 ರನ್ ಸಿಡಿಸಿ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಮುಂಬೈಗೆ ರೋಚಕ ಜಯ ತಂದುಕೊಟ್ಟಿದ್ದಾರೆ.
ಹೈದರಾಬಾದ್ ನಲ್ಲಿ ಮಂಗಳವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಮುಂಬೈ ಪರ ಆಡಿದ ಸೂರ್ಯಕುಮಾರ್ 46 ಎಸೆತಗಳಲ್ಲಿ 70 ರನ್ ಸಿಡಿಸಿದರೆ, ಇದನ್ನೂ ಮೀರಿಸುವಂತೆ ಶಿವಂ ದುಬೆ 36 ಎಸೆತಗಳಲ್ಲಿ 71 ರನ್ ಚಚ್ಚಿದರು. ಇವರಿಬ್ಬರು ಪೈಪೋಟಿಗೆ ಬಿದ್ದವರಂತೆ ಬ್ಯಾಟ್ ಬೀಸಿ ನಾಲ್ಕನೇ ವಿಕೆಟ್ ಗೆ 130 ರನ್ ಜೊತೆಯಾಟ ನಿಭಾಯಿಸಿದರು.
ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 4 ವಿಕೆಟ್ ಗೆ 192 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಸರ್ವಿಸಸ್ ತಂಡ 19.3 ಓವರ್ ಗಳಲ್ಲಿ 153 ರನ್ ಗೆ ಆಲೌಟಾಗಿ ಸೋಲುಂಡಿತು.
ಗಾಯದ ಕಾರಣ ಮೂರು ತಿಂಗಳು ಮೈದಾನದಿಂದ ಹೊರಗೆ ಇದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶಿವಂ ದುಬೆ ಸತತ 7 ಸಿಕ್ಸರ್ ಸಿಡಿಸಿ ಗಮನ ಸೆಳೆದರು.
https://twitter.com/dhotedhulwate/status/1863952911585419625