ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿದೆ.
ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿಯ ಬೆಂಗಳೂರು ಮತ್ತು ಪುಣೆಯ ಮಕ್ಕಳು ಪರಸ್ಪರ ಸ್ಪರ್ಧಿಸಿದ್ದಾರೆ.
ಈ ಇಂಟರ್ ಸಿಟಿ ಪಂದ್ಯಾವಳಿಯಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಸುಮಾರು 250 ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು. ಪುಣೆ ತಂಡಗಳು ಐದು ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದರೆ, ಬೆಂಗಳೂರು ತಂಡ ಒಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪುಣೆ ತಂಡ ಅಡರ್-9, ಅಡರ್-11, ಅಡರ್-13, ಮತ್ತು ಅಡರ್-15 ನಲ್ಲಿ ಪ್ರಶಸ್ತಿಗಳನ್ನು ಗೆದಿದ್ದು, ಅಂಡರ್-17 ನಲ್ಲಿ ಬೆಂಗಳೂರಿನ ಎಸ್ಯುಎಫ್ಸಿ ಪಿಲ್ಲರ್ಸ್ ಜಯ ಸಾಧಿಸಿದೆ. ಜೊತೆಗೆ ಪುಣೆ ತಂಡವು ಅತ್ಯುತ್ತಮ ಗೋಲ್ ಕೀಪರ್, ಉದಯೋನ್ಮುಖ ಆಟಗಾರ ಹಾಗು ಅತ್ಯುತ್ತಮ ಕೋಚ್ ಗಳಿಗೆ ವೈಯಕ್ತಿವಾಗಿ ನೀಡಿದ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದೆ.
ವೈಯಕ್ತಿಕ ಪ್ರಶಸ್ತಿಗಳ ಪಟ್ಟಿ:
ಅಂಡರ್-9
ಅತ್ಯುತ್ತಮ ಗೋಲ್ ಕೀಪರ್: ಅಗಸ್ತ್ಯ ಸುರೇಶ್ (ಬೆಂಗಳೂರು)
ಅತ್ಯುತ್ತಮ ಆಟಗಾರ: ಏಕಂ ಸಿಂಗ್ (ಪುಣೆ)
ಉದಯೋನ್ಮುಖ ಆಟಗಾರ: ಆಸ್ಟಿನ್ ಲೋರೀಗ್ಗಿಯೋ (ಬೆಂಗಳೂರು), ನೋರಾ ಗುಪ್ತ (ಪುಣೆ)
ಅತ್ಯುತ್ತಮ ಕೋಚ್: ರಿಯಾನ್ ಯಾದಗಿರಿ (ಪುಣೆ), ನವೀನ್ ಕುಮಾರ್ (ಬೆಂಗಳೂರು)
ಅಂಡರ್-11
ಅತ್ಯುತ್ತಮ ಗೋಲ್ ಕೀಪರ್: ಅರ್ಹತ್ವ ಡೋಂಗ್ರೆ (ಪುಣೆ)
ಅತ್ಯುತ್ತಮ ಆಟಗಾರ: ಅವ್ಯುಕ್ತ್ ನಂದಿ (ಪುಣೆ)
ಉದಯೋನ್ಮುಖ ಆಟಗಾರ: ಕಬೀರ್ ದೂತ್ (ಪುಣೆ), ಶನಯಾ (ಬೆಂಗಳೂರು)
ಅತ್ಯುತ್ತಮ ಕೋಚ್: ಪ್ರತಿಕ್ಷ ದೇವಾಂಗ್ (ಪುಣೆ), ಉಮಾಶಂಕರ್ (ಬೆಂಗಳೂರು)
ಅಂಡರ್-13
ಅತ್ಯುತ್ತಮ ಗೋಲ್ ಕೀಪರ್: ದಿಯಾನ್ ಗೋಯಲ್ (ಪುಣೆ)
ಅತ್ಯುತ್ತಮ ಆಟಗಾರ: ಜೆಡೆನ್ ಜೋಸೆಫ್ (ಬೆಂಗಳೂರು)
ಉದಯೋನ್ಮುಖ ಆಟಗಾರ: ಡೆಲಿಝ ಉನ್ವಾಲ (ಬೆಂಗಳೂರು)
ಅತ್ಯುತ್ತಮ ಕೋಚ್: ಪ್ರಬುದ್ಧ ಗೈಕ್ವಾಡ್ (ಪುಣೆ), ಅದಿತಿ ಪಿ ಜಾಧವ್ (ಬೆಂಗಳೂರು)
ಅಂಡರ್-15
ಅತ್ಯುತ್ತಮ ಗೋಲ್ ಕೀಪರ್: ಸಿದ್ದಾರ್ಥ್ ಗುಪ್ತ (ಬೆಂಗಳೂರು)
ಅತ್ಯುತ್ತಮ ಆಟಗಾರ: ಅರ್ಪಿತ್ ಮಿಶ್ರಾ (ಪುಣೆ)
ಅತ್ಯುತ್ತಮ ಕೋಚ್: ಸಿದ್ದಾರ್ಥ್ ಮಿಶ್ರಾ (ಬೆಂಗಳೂರು), ಮೊಹಸಿನ್ ಅಬ್ದುಲ್ಲಾ ತಂಬೋಲಿ (ಪುಣೆ)
ಅಂಡರ್-17
ಅತ್ಯುತ್ತಮ ಆಟಗಾರ: ಹರ್ಷಿತ್ ಎಸ್ ವಿ (ಬೆಂಗಳೂರು)