Wednesday, December 24, 2025
Google search engine
Homeಕ್ರೀಡೆಚಾಂಪಿಯನ್ಸ್ ಟ್ರೋಫಿ: ಭಾರತ-ಪಾಕಿಸ್ತಾನ ಹೈಲೋಲ್ಟೇಜ್ ಪಂದ್ಯ ಇಂದು

ಚಾಂಪಿಯನ್ಸ್ ಟ್ರೋಫಿ: ಭಾರತ-ಪಾಕಿಸ್ತಾನ ಹೈಲೋಲ್ಟೇಜ್ ಪಂದ್ಯ ಇಂದು

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ನಡೆಯುವ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಪಾಕಿಸ್ತಾನ ಪಾಲಿಗೆ ಅತ್ಯಂತ ಪ್ರಮುಖವಾಗಿದ್ದರೆ, ಬಾಂಗ್ಲಾದೇಶ ಮಣಿಸಿ ಶುಭಾರಂಭ ಮಾಡಿರುವ ಭಾರತಕ್ಕೆ ಪ್ರತಿಷ್ಠೆಯ ವಿಷಯವಾಗಿದೆ.

ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ ಗಳಿಂದ ಸೋಲುಂಡು ಟೂರ್ನಯಿಂದ ಬಹುತೇಕ ಹೊರಬಿದ್ದಿದೆ. ಇದರಿಂದ ಪಾಕಿಸ್ತಾನ ನಾಕೌಟ್ ಹಂತ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಗೆದ್ದು ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸಬೇಕಾಗಿದೆ.

ಭಾರತ ಕಳೆದ 6 ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. 2024ರ ಟಿ-20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ 9 ವಿಕೆಟ್ ಗಳ ಭಾರೀ ಅಂತರದಿಂದ ಗೆದ್ದು ದಾಖಲೆ ಬರೆದಿತ್ತು. ಅಹಮದಾಬಾದ್ ನಲ್ಲಿ ನಡೆದ ೨೦೨೩ರ ಏಕದಿನ ವಿಶ್ವಕಪ್ ನಲ್ಲಿ ಭಾರತ 7 ವಿಕೆಟ್ ಗಳಿಂದ ಜಯ ಸಾಧಿಸಿದ್ದು ಈಗಲೂ ಅವಿಸ್ಮರಣೀಯವಾಗಿದೆ.

ಒಟ್ಟಾರೆ ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು 157 ಬಾರಿ ಮುಖಾಮುಖಿ ಆಗಿದ್ದು, ಭಾರತ 57ರಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 73ರಲ್ಲಿ ಜಯ ಸಾಧಿಸಿದೆ. 5 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡೂ ತಂಡಗಳು 5 ಬಾರಿ ಮುಖಾಮುಖಿ ಆಗಿದ್ದು, ಭಾರತ 2-3ರಿಂದ ಹಿನ್ನಡೆ ಅನುಭವಿಸಿದೆ. 2004ರಲ್ಲಿ ಮೊದಲ ಬಾರಿ ಮುಖಾಮುಖಿ ಆಗಿದ್ದರೆ, ಎರಡನೇ ಬಾರಿ 2017ರ ಫೈನಲ್ ನಲ್ಲಿ ಎದುರಾಗಿದ್ದವು. ಈ ಪಂದ್ಯವನ್ನು ಪಾಕಿಸ್ತಾನ 180 ರನ್ ಗಳಿಂದ ಗೆದ್ದಿತ್ತು.

ಭಾರತ ತಂಡ ಶುಭಮನ್ ಗಿಲ್ ಶತಕ ಹಾಗೂ ಮೊಹಮದ್ ಶಮಿ 5 ವಿಕೆಟ್ ಗೊಂಚಲಿನ ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಗೆಲುವು ಕಂಡಿತ್ತು. 6ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದೆ. ರಿಷಭ್ ಪಂತ್ ಗಾಯದ ಸಮಸ್ಯೆ ಕಾರಣ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆ ಇದೆ. ಅಭ್ಯಾಸದಲ್ಲಿ ಕೂಡ ಅವರು ಕಾಣಿಸಿಕೊಳ್ಳದೇ ಇರುವುದು ಅನುಮಾನ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments