ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 4ನೇ ಟಿ-20 ಪಂದ್ಯ ಹವಾಮಾನ ವೈಪರಿತ್ಯದಿಂದ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ.
ಲಕ್ನೋದಲ್ಲಿ ಬುಧವಾರ ನಡೆದ ಪಂದ್ಯವನ್ನು ಹಲವಾರು ಬಾರಿ ವೀಕ್ಷಿಸಿದ ನಂತರ ಅಂಪೈರ್ ಗಳು ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ಪ್ರಕಟಿಸಿದರು. ಇದರೊಂದಿಗೆ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿದೆ.
ರಾತ್ರಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವನ್ನು 5ನೇ ಬಾರಿ ಮೈದಾನ ಪರಿಶೀಲಿಸಿದ ನಂತರ ರಾತ್ರಿ 9.25ಕ್ಕೆ ದಟ್ಟವಾದ ಮಂಜು ಆವರಿಸಿದ ಕಾರಣ ಆಟ ಆಡಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದರು.


