ಭಾರತ ವನಿತೆಯರ ತಂಡ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಐರ್ಲೆಂಡ್ ವಿರುದ್ಧ 435 ರನ್ ಕಲೆ ಹಾಕಿದ್ದು, ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ.
ಭಾರತ ಪ್ರವಾಸ ಕೈಗೊಂಡಿರುವ ಐರ್ಲೆಂಡ್ ವಿರುದ್ಧ ಬುಧವಾರ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಕಲೆ ಹಾಕಿತು.
ಇಬ್ಬರು ಆರಂಭ ಆಟಗಾರ್ತಿಯರು ಶತಕ ಸಿಡಿಸಿ ಮತ್ತೊಂದು ವಿಕ್ರಮ ಸಾಧಿಸಿದರು. ನಾಯಕಿ ಸ್ಮೃತಿ ಮಂದಾನ 80 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 135 ರನ್ ಚಚ್ಚಿದರೆ, ಪ್ರತಿಕಾ ರಾವಲ್ 129 ಎಸೆತಗಳಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 154 ರನ್ ಚಚ್ಚಿದರು.
ಸ್ಮೃತಿ ಮಂದಾನ ಮತ್ತು ಪ್ರತಿಕಾ ಮೊದಲ ವಿಕೆಟ್ ಗೆ 26.4 ಓವರ್ ಗಳಲ್ಲಿ 233 ರನ್ ಜೊತೆಯಾಟದಿಂದ ಮತ್ತೊಂದು ದಾಖಲೆ ಬರೆದಿದ್ದೂ ಅಲ್ಲದೇ ಭಾರತ ವಿಶ್ವದಾಖಲೆಯ ಮೊತ್ತ ದಾಖಲಿಸುವ ಭರವಸೆ ಮೂಡಿಸಿದರು.