Wednesday, December 24, 2025
Google search engine
Homeಕ್ರೀಡೆಐಪಿಎಲ್ ಹರಾಜು ಫಿಕ್ಸ್: ಸಿಎಸ್ ಕೆ ವಿರುದ್ಧ ಲಲಿತ್ ಮೋದಿ ಮ್ಯಾಚ್ ಫಿಕ್ಸಿಂಗ್ ಆರೋಪ

ಐಪಿಎಲ್ ಹರಾಜು ಫಿಕ್ಸ್: ಸಿಎಸ್ ಕೆ ವಿರುದ್ಧ ಲಲಿತ್ ಮೋದಿ ಮ್ಯಾಚ್ ಫಿಕ್ಸಿಂಗ್ ಆರೋಪ

ಮುಂಬೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಫಿಕ್ಸಿಂಗ್ ಚಳಕವನ್ನು ದೇಶಭ್ರಷ್ಟ ಆಡಳಿತಗಾರ ಲಲಿತ್ ಮೋದಿ ಬಿಚ್ಚಿಟ್ಟಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮೋದಿ ಚೆನ್ನೈ ಕಿಂಗ್ಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ನಡುವೆ ಸಿಎಸ್ಕೆ ಫ್ರಾಂಚೈಸಿ ಅಂಪೈರ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಅದರ ಜೊತೆ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಡುತ್ತಿದ್ದ ಮಾಸ್ಟರ್ ಪ್ಪಾನ್ ಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಟಾರ್ಗೆಟ್ ಮಾಡುತ್ತಿದ್ದ ವಿಚಾರವನ್ನು ಮೋದಿ ಬಹಿರಂಗಪಡಿಸಿದ್ದಾರೆ.

2209ರ ಐಪಿಎಲ್ ಹರಾಜಿಗೂ ಮುನ್ನ ಇಂಗ್ಲೆಂಡ್ ಆಲ್ರೌಂಡರ್ ಫ್ಲಿಂಟಾಫ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಬಾರದು ಸಿಎಸ್ ಕೆ ಮಾಲೀಕರಾದ ಎನ್.ಶ್ರೀನಿವಾಸನ್ ತಿಳಿಸಿದ್ದರು. ಇದನ್ನು ನಾನು ಎಲ್ಲಾ ಫ್ರಾಂಚೈಸಿಗಳ ಬಳಿ ಹೇಳಿದ್ದೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಖರೀದಿಸಿದ್ದರು.

ಅಂದರೆ ಇಲ್ಲಿ ಮೊದಲೇ ಬಿಡ್ ಮಾಡಬಾರದೆಂದು ಸೂಚಿಸಲಾಗುತ್ತಿತ್ತು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

ಒಂದು ವೇಳೆ ನಾವು ಅಂದಿನ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್ ವಿರುದ್ಧ ತಿರುಗಿನಿಂತಿದ್ದರೆ ಅವರು ಐಪಿಎಲ್ ನಡೆಯಲು ಬಿಡುತ್ತಿರಲಿಲ್ಲ.

ಹೀಗಾಗಿ ಸಿಎಸ್ಕೆ ಫ್ರಾಂಚೈಸಿಯ ಬೇಡಿಕೆಗೆ ತಕ್ಕಂತೆ ಆಟಗಾರರ ಬಿಡ್ಡಿಂಗ್ ನಡೆದಿದೆ ಎಂದು ಮೋದಿ ಆರೋಪಿಸಿದ್ದಾರೆ

ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್‌ಗಳನ್ನೇ ನೇಮಿಸಿಕೊಳ್ಳುತ್ತಿದ್ದರು.

ಈ ಮೂಲಕ ಅಂಪೈರ್‌ಗಳನ್ನು ಫಿಕ್ಸ್ ಮಾಡಿಕೊಳ್ಳುತ್ತಿದ್ದರು. ಇದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಇದನ್ನು ಪ್ರಶ್ನಿಸಿದ ನನ್ನ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರು ತಿರುಗಿಬಿದ್ದಿದ್ದರು ಎಂದು ಮೋದಿ ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಆರೋಪದಡಿ ೨ ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇದೀಗ ಅಂಪೈರ್ ಫಿಕ್ಸಿಂಗ್ ಹಾಗೂ ಹರಾಜು ಫಿಕ್ಸಿಂಗ್ ಆರೋಪಗಳ ಸುಳೀಗೆ ಸಿಲುಕಿದೆ.

ಈ ಆರೋಪಗಳ ಮೂಲಕ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments